Publish Date: Wed, 19 Apr 2023 (10:09 IST)
Updated Date: Wed, 19 Apr 2023 (10:34 IST)
ಮಂಡ್ಯ : ಜೆಡಿಎಸ್ ಮಂಡ್ಯ ಜಿಲ್ಲೆಯ ಜನತೆಯ ದಳ. ಇಂತಹ ಜೆಡಿಎಸ್ ಅನ್ನು ಧೂಳೀಪಟ ಮಾಡುತ್ತೇನೆ ಎಂದು ಕೆಲವರು ದುರಹಂಕಾರದಲ್ಲಿ ಹೇಳುತ್ತಾ ಇದ್ದಾರೆ ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಭಾಷಣ ಮಾಡುವ ವೇಳೆ ಸುಮಲತಾ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜನರಿಗಾಗಿ ಇರುವುದು ಜೆಡಿಎಸ್ ಪಕ್ಷ. ಇಂತಹ ಪಕ್ಷವನ್ನು ಯಾರು ಧೂಳೀಪಟ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಜನರಿಗೆ ಗೊತ್ತು ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಮುಗಿಸಿದ್ದೇನೆ ಎಂದು ಹೇಳುತ್ತಾರೆ. ಇದಕ್ಕೆ ಉತ್ತರ ಮಂಡ್ಯ ಜಿಲ್ಲೆಯ ಜನರಿಂದ ನಾನು ಬಯಸುತ್ತಾ ಇದ್ದೇನೆ. ನನ್ನ ಕೈಯಲ್ಲಿ ಶಕ್ತಿ ಇಲ್ಲ, ನಮ್ಮದು ಸಣ್ಣ ಪಕ್ಷ. ರೈತರ ಈ ಪಕ್ಷವನ್ನು ಮುಗಿಸುತ್ತೇವೆ ಎಂದು ಸವಾಲು ಸ್ವೀಕಾರ ಮಾಡಿದ್ದಾರೆ.