ಗಂಡ ಸತ್ತು ಆರು ತಿಂಗಳಾಗಿಲ್ಲ ಎಂಬ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆಗೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದು, ಯಾವ ದಿನವೂ ಈ ರೀತಿ ಮಾತುಗಳು ಮಹಿಳೆಯರ ಬಗ್ಗೆ ಬರಬಾರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನ ಪೂಜಿಸ್ತಾರೆ. ಮಹಿಳೆಯರನ್ನ ಪೂಜಿಸಿದರೆ ಒಳ್ಳೆಯದಾಗುತ್ತೆ ಅನ್ನೋ ದೇಶ ನಮ್ಮದು. ದೇವೆಗೌಡರಿಗೆ ಅಂಬರೀಶ್ ತಂದೆ ಸ್ಥಾನ ನೀಡಿದ್ದರು. ನಾನು ಕೂಡ ಅದೇ ಮರ್ಯಾದೆ ಕೊಡುತ್ತಿದ್ದೇನೆ ಎಂದರು. ಹೀಗಾಗಿ ನಾನು ರೇವಣ್ಣ ಹಳೀಕೆಗೆ ಪ್ರತಿಕ್ರಿಯೆ ನೀಡಲ್ಲ ಅಂತ ಸುಮಲತಾ ಹೇಳಿದ್ದಾರೆ.
ನಾವು ಏನೇ ಮಾತಾಡಿದರೂ ಜನಕ್ಕೆ ಬೇರೆ ಸಂದೇಶ ಹೋಗುತ್ತದೆ. ನಾವೆಲ್ಲಾ ಸಾಮಾಜಿಕ ಕ್ಷೇತ್ರದಲ್ಲಿರುವಂತವರು. ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು. ಏನ್ಮಾತಾಡಿದ್ರೆ ಸರಿ, ತಪ್ಪು ಅನ್ನೋದನ್ನ ನೋಡಬೇಕು. ಯಾವುದು ಸರಿ ತಪ್ಪು ಅನ್ನೋದನ್ನ ಅವರು ತಿಳಿದುಕೊಳ್ಳಬೇಕು. ಈ ಬಗ್ಗೆ ಜನ ತೀರ್ಮಾನ ಮಾಡ್ಬೇಕು ಎಂದರು.
ನನ್ನಲ್ಲಿ ತಪ್ಪಿದ್ದರೆ ನಾನು ಬೇಜಾರ್ ಮಾಡ್ಕೋಬೇಕು. ನನ್ನಲ್ಲಿ ಯಾವುದೇ ತಪ್ಪಿಲ್ಲ, ನಾನು ಯಾವತ್ತೂ ಯಾರಿಗೂ ಸವಾಲಾಕಿಲ್ಲ. ಯಾರನ್ನೂ ವಿರೋಧ ಮಾಡಲ್ಲ, ವಿವಾದ ಕೂಡ ಮಾಡಲ್ಲ. ಯಾರು ಏನೇ ಮಾತಾಡಿಕೊಳ್ಳಲಿ, ನಾನಂತೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಎಂದರು.
ಆ ಪ್ರಚೋದನಾಕಾರಿ ಹೇಳಿಕೆ ನೀಡಿ, ನನ್ನಿಂದ ಬೇರೆಯದೆ ಮಾತುಗಳನ್ನಾಡಿಸುವ ಯತ್ನ ಸಫಲವಾಗಲ್ಲ. ನನ್ನ ಆತ್ಮಸ್ಥೈರ್ಯ ಕುಗ್ಗಿಸಲೂ ಆಗಲ್ಲ.
ಅಂಬರೀಶ್ ಅವರ ಮನಸ್ಥಿತಿ ಕೂಡ ಕೆಟ್ಟದ್ದಾಗಿ ಇರಲಿಲ್ಲ. ಯಾರು ಏನೇ ಮಾತಾಡಿದ್ರು ಡೋಂಟ್ ಕೇರ್ ಅನ್ನೋರು. ನಾನು ಕೂಡ ಅಂಬರೀಶ್ ಮಾರ್ಗದರ್ಶನದಲ್ಲೇ ಹೋಗ್ತೀನಿ ಎಂದರು.