ಸುಮಲತಾಗೆ ಬಿರುಕಿಗೂ, ದುರಸ್ತಿಗೂ ವ್ಯತ್ಯಾಸ ಗೊತ್ತಿಲ್ಲ: ಜಿಟಿ ದೇವೇಗೌಡ

Webdunia
ಭಾನುವಾರ, 11 ಜುಲೈ 2021 (19:45 IST)
ಸಂಸದೆ ಸುಮಲತಾ ಅವರಿಗೆ ಬಿರುಕಿಗೂ ಮತ್ತು ದುರಸ್ತಿಗೂ ವ್ಯತ್ಯಾಸ ಗೊತ್ತಿಲ್ಲ. ಹೀಗಾಗಿ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿ ಪದ ಪ್ರಯೋಗ ಗೊತ್ತಿಲ್ಲದೇ ಏನೋ ಹೇಳಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ಉಳಿವಿನ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಕೆಆರ್ ಎಸ್ ಬಿರುಕು ಬಿಟ್ಟಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಸರಿಯಲ್ಲ ಎಂದರು.
ಮಂಡ್ಯ ಜಗಳ ಯಾರಿಗೂ ಶೋಭೆ ತರುವಂತದ್ದಲ್ಲ. ಸುಮಲತಾ ಹಾಗೂ ಜೆಡಿಎಸ್ ಮುಖಂಡರು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಕಿತ್ತಾಟ ಇಬ್ಬರಿಗೂ ನಷ್ಟವನ್ನುಂಟು ಮಾಡುತ್ತೆ. ಮಾತಿನ ಸಮರ ಯಾರಿಗೂ ಲಾಭವನ್ನುಂಟು ಮಾಡುವುದಿಲ್ಲ. ಈ ಮಾತಿನ ಸಮರವನ್ನ ಅಂತ್ಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಕೆಆರ್ ಎಸ್ ವಿಷಯದಲ್ಲಿ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಕೆಆರ್ ಎಸ್ ಗೆ ತೊಂದರೆಯಾದರೆ ಗಣಿಗಾರಿಕೆಯನ್ನ ಸಂಪೂರ್ಣವಾಗಿ ನಿಲ್ಲಿಸಬೇಕು. ತೊಂದರೆ ಇಲ್ಲವಾದರೆ ಗಣಿಗಾರಿಕೆಗೆ ಸಮ್ಮತಿ ಸೂಚಿಸಬೇಕು. ಕೆ ಆರ್ ಎಸ್ ವಿಚಾರದಲ್ಲಿ ಸಮಗ್ರ ವರದಿಗಾಗಿ ತಜ್ಞರ ಸಮಿತಿ ರಚಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ದಿನದಂದು ಮುಂಬೈನಲ್ಲಿ ಹಲವೆಡೆ 30 ಗಂಟೆಗಳ ಕಾಲ ನೀರು ಬರಲ್ಲ

ಕರಾವಳಿ ಭಾಗದಲ್ಲಿ ಹೀಟ್‌ವೇವ್‌ ಎಫೆಕ್ಟ್‌: ದ.ಕನ್ನಡ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪೆಷಲ್ ವ್ಯವಸ್ಥೆ

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕಾಗಿ ಅಶ್ಲೀಲ ಹಾಡುಗಳನ್ನು ಬಳಸುವಂತಿಲ್ಲ

ಕೇರಳದಲ್ಲಿ ಯುಡಿಎಫ್, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಜಯಭೇರಿ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

ಬೌರಿಂಗ್ ಆಸ್ಪತ್ರೆ ದುರಂತ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಆಸ್ಪತ್ರೆ, ಕಾಂಪೌಂಡ್ ಗೋಡೆಗಳ ಪರಿಶೀಲನೆಗೆ ಸೂಚನೆ

ಮುಂದಿನ ಸುದ್ದಿ
Show comments