Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್ ಬಿಚ್ಚಿಟ್ಟು ಜೈಲು ಶಿಕ್ಷೆಗೆ ಒಳಗಾದ ಪೊಲೀಸ್ ಅಧಿಕಾರಿ

ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್ ಬಿಚ್ಚಿಟ್ಟು ಜೈಲು ಶಿಕ್ಷೆಗೆ ಒಳಗಾದ  ಪೊಲೀಸ್ ಅಧಿಕಾರಿ
ಬರ್ಲಿನ್ , ಶನಿವಾರ, 22 ಡಿಸೆಂಬರ್ 2018 (06:55 IST)
ಬರ್ಲಿನ್ : ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟಿದ್ದಕ್ಕೆ ಪೊಲೀಸ್ ಅಧಿಕಾರಿಯೊರ್ವ ಜೈಲು ಶಿಕ್ಷೆಗೆ ಒಳಗಾದ ಘಟನೆ ಜರ್ಮನಿಯಲ್ಲಿ ನಡೆದಿದೆ.


ಜರ್ಮನಿ ಪೊಲೀಸ್ ಅಧಿಕಾರಿಯೊರ್ವ ನಿಗೆ ಯುವತಿ ಕಾಂಡೋಮ್ ಬಳಕೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದಳು. ಆದರೆ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟಿದ್ದಾನೆ. ಈ ವಿಚಾರ ತಿಳಿದು ಕೋಪಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.


ರೇಪ್ ಹಾಗೂ ಲೈಂಗಿಕ ಕಿರುಕುಳ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದೆ. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ 8 ತಿಂಗಳು ಜೈಲು ಶಿಕ್ಷೆ ಹಾಗೂ 3 ಸಾವಿರ ಯುರೋ(ಅಂದಾಜು 2.39 ಲಕ್ಷ ರೂ.) ದಂಡವನ್ನು ವಿಧಿಸಿದೆ. ಅಲ್ಲದೇ 96 ಯುರೋಗಳನ್ನು(ಅಂದಾಜು 7500 ರೂ.)ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ ವಿವೋ ಖರೀದಿಸುವವರಿಗೆ ಭರ್ಜರಿ ಆಫರ್