ದೆ. ಸಿಎಂ ಆಗಿ ಸುಖಜೀಂದರ್ ಸಿಂಗ್ ರಾಂದವ್ ಹೆಸರು ಫೈನಲ್ ಮಾಡುವ ಸಾಧ್ಯತೆ ಇದೆ. ನಿನ್ನೆಯಷ್ಟೆ ಸಿಎಂ ಸ್ಥಾನ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಸಚಿವ ಸ್ಥಾನಗಳಿಗೂ ರೇಸ್ ಶುರುವಾಗಿದೆ. ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಅವರನ್ನ ಸಿಎಂ ಮಾಡುವ ಸಾಧ್ಯತೆ ಇತ್ತು. ಆದ್ರೆ ಅವರು, ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಸೋನಿ ತನ್ನ ಪಕ್ಷದ ಸಹೋದ್ಯೋಗಿ ರಾಹುಲ್ ಗಾಂಧಿ ಜೊತೆ ಚರ್ಚಿಸಿ ಈ ವಿಚಾರ ಪ್ರಸ್ತಾಪಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಸಿಖ್ ಸಮುದಾಯದವರು ಮುಖ್ಯಮಂತ್ರಿಯಾದೇ ಇದ್ದರೆ “ಸಂಕೀರ್ಣ ಪರಿಣಾಮಗಳನ್ನು” ಬೀರುತ್ತದೆ, ಹೀಗಾಗಿ ಸಿಖ್ ಸಮುದಾಯದ ಪ್ರಭಾವಿ ನಾಯಕನನ್ನು ಸಿಎಂ ಮಾಡಿ ಎಂದು ತಿಳಿಸಿದ್ದಾರೆ. ಹೀಗಾಗಿ ಸಿಖ್ ಸಮುದಾಯದ ಪ್ರಭಾವಿ ನಾಯಕ ಸುಖಜೀಂದರ್ ಸಿಂಗ್ ರಾಂದವ್, ಜೊತೆಗೆ ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ದಲಿತ ಸಮುದಾಯ, ಸಿಖ್ ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನ ನೀಡುವ ಸಾದ್ಯತೆ ಇದೆ. ಇನ್ನೂ ಅರುಣಾ ಚೌದರಿಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.