Select Your Language

Notifications

webdunia
webdunia
webdunia
webdunia

Suhas Shetty Case: ಮಾಧ್ಯಮಗಳಲ್ಲಿ ಫೋಸ್ಟ್ ಹಂಚಿದವರಿಗೆ ನಡುಕ ಶುರು, ಯಾಕೆ ಗೊತ್ತಾ

ಸುಹಾಶ್ ಶೆಟ್ಟಿ ಪ್ರಕರಣ

Sampriya

ಮಂಗಳೂರು , ಶನಿವಾರ, 3 ಮೇ 2025 (21:29 IST)
ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕೊಂಡಿದ್ದು ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ.

ಹತ್ಯೆಗೆ ಸೇಡು ತೀರಿಸಿಕೊಳ್ಳುವ ಅಥವಾ ಹತ್ಯೆಯನ್ನು ಸಂಭ್ರಮಾಚರಣೆ ಮಾಡುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಲ್ಕಿ, ಉರ್ವ, ಬರ್ಕೆ, ಮೂಡಬಿದ್ರಿ ಮತ್ತು ಕಾವೂರುನಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಥಮ ಮಾಹಿತಿ ವರದಿಗಳು (FIR) ದಾಖಲಾಗಿವೆ.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಫೋಸ್ಟ್ ಗಳು ಕರಾವಳಿ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಹತ್ಯೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್‌ಗಳು ವೈರಲ್ ಆಯಿತು. ಕೆಲವು ಫೋಸ್ಟ್ ಗಳಲ್ಲಿ ಸುಹಾಸ್ ಶೆಟ್ಟಿಯ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ, ನಮ್ಮ ಶಕ್ತಿಯನ್ನು ತೋರಿಸದಿದ್ದರೆ ನಾವು ಬದುಕುವುದಿಲ್ಲ, ರಕ್ತಕ್ಕೆ ರಕ್ತವೇ ಉತ್ತರ ಎಂದು ಬರೆಯಲಾಗಿದೆ.

ಇನ್ನೊಂದು ಫೋಸ್ಟ್ ನಲ್ಲಿ Finished ಎಂಬ ಪದದೊಂದಿಗೆ ಸುಹಾಸ್ ಶೆಟ್ಟಿ ಫೋಟೋ ಹಾಕಲಾಗಿದೆ. ಶೀಘ್ರದಲ್ಲೇ ಮುಂದಿನ ವಿಕೆಟ್ ಬೀಳಲಿದೆ ಎಂದು ಫೋಸ್ಟ್ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

Pahalgam Attack: ಪಾಕ್ ಯುವತಿ ಜತೆಗಿನ ಮದುವೆಯನ್ನು ಗುಟ್ಟಾಗಿಟ್ಟ ಯೋಧನಿಗೆ ಇದೀಗ ಪರದಾಡುವ ಸ್ಥಿತಿ