Publish Date: Mon, 25 May 2020 (18:54 IST)
Updated Date: Mon, 25 May 2020 (18:56 IST)
ಖಾಸಗಿ ಆಸ್ಪತ್ರೆಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಕಾಮುಕರಿಬ್ಬರು ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಅಸ್ವಸ್ಥಗೊಂಡಿದ್ದ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿನ ಐಸಿಯುನಲ್ಲಿ ಇಬ್ಬರು ಎರಡು ದಿನ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.
ಬಿಲಾಸ್ಪುರದ ನೆಹರು ನಗರದಲ್ಲಿ ಘಟನೆ ನಡೆದಿದ್ದು, ಸದ್ಯ ಆಘಾತಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ವೆಂಟಿಲೇಟರ್ ನಲ್ಲಿದ್ದು, ತಂದೆಗೆ ತನ್ನ ಮೇಲಾದ ಕೃತ್ಯದ ಬಗ್ಗೆ ಬರೆದು ತಿಳಿಸಿದ್ದಾಳೆ. ಕೇಸ್ ದಾಖಲಾಗಿದ್ದು, ತನಿಖೆ ಶುರುವಾಗಿದೆ.