Publish Date: Fri, 28 Jan 2022 (17:00 IST)
Updated Date: Fri, 28 Jan 2022 (17:02 IST)
ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ವಿದ್ಯಾರ್ಥಿಯೊಬ್ಬ ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ಹೊಗೆನಕಲ್ ಜಲಪಾತದಲ್ಲಿ ಬಿದ್ದು ನೀರುಪಾಲಾಗಿದ್ದಾನೆ.
ಮೈಸೂರು ಮೂಲದ ಸಂಗಮೇಶ್, ಮಗ ಉಮಾಶಂಕರ್(19) ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ. ಈತ ಸ್ನೇಹಿತರಾದ ರವಿಕುಮಾರ್, ಶಿವಪ್ರಸಾದ್ ಅವರೊಟ್ಟಿವೆ ರಜೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತಕ್ಕೆ ತೆರಳಿದ್ದಾರೆ.
ಈ ವೇಳೆ ಸೆಲ್ಫಿ ಹುಚ್ಚಿನಿಂದಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಜಲಪಾತದ ಬಳಿ ತೆರಳಿದ್ದ ಉಮಾಶಂಕರ್ ಕಾಲುಜಾರಿ ನೀರುಪಾಲಾಗಿದ್ದಾನೆ.
ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್ ಸ್ನೇಹಿತರು ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿದ್ದಾನೆ. ಆಗ ಸ್ನೇಹಿತರನ್ನು ಫೋಟೋ ತೆಗೆಯುವಂತೆ ಹೇಳಿದ್ದಾನೆ. ಸ್ನೇಹಿತರು ಫೋಟೋಗಳನ್ನು ತೆಗೆದ ಬಳಿಕ ಜಲಪಾತದ ಕೊರಕಲ್ಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ.
ಮಲೆ ಮಹದೇಶ್ವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.