ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡಿದೆ. ಬಹುತೇಕ ಪ್ರದೇಶಗಳು ರಷ್ಯ ಕೈವಶ ಮಾಡಿಕೊಂಡಿದೆ. ಕಟ್ಟಡಗಳು, ಜನವಸತಿ ಪ್ರದೇಶಗಳ ಮೇಲೆ ಕ್ಷಿಪಣಿ, ಬಾಂಬ್ ದಾಳಿಗಳು ನಡೆಯುತ್ತಿದೆ. ಅಮಾಯಕ ನಾಗರೀಕರು ಬಲಿಯಾಗುತ್ತಿದ್ದಾರೆ.
ರಷ್ಯಾ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಶೇಕರಪ್ಪ ಖಾರ್ಕೀವ್‌ನಲ್ಲಿ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಉಕ್ರೇನ್‌ನಲ್ಲಿ ಭಾರತದ 2ನೇ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂಜಾಬ್‌ನ 22 ವರ್ಷ ಚಂದನ್ ಜಿಂದಾಲ್ ಇಂದು(ಮಾ.02) ಕೊನೆಯುಸಿರೆಳೆದಿದ್ದಾರೆ. ಉಕ್ರೇನ್‌ನ ವಿನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಮೆಮೋರಿಯಲ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಚಂದನ್ ಜಿಂದಾಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೆದುಳು ಸ್ಟ್ರೋಕ್‌ಗೆ ತುತ್ತಾದ ಚಂದನ್ ಜಿಂದಾಲ್ ಕಳೆದ ಒಂದು ತಿಂಗನಿಂದ ವಿನಿಟ್ಸಿಯಾದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದನ್ ಜಿಂದಾಲ್ ಆರೋಗ್ಯ ಕಳೆದ 1 ವಾರದಲ್ಲಿ ತೀವ್ರವಾಗಿ ಹದಗೆಟ್ಟಿತ್ತು. ಮೆದಳು ನಿಷ್ಕ್ರೀಯಗೊಂಡಿತ್ತು. ಮಗನನ್ನು ಉಳಿಸಲು ಚಂದನ್ ಪೋಷಕರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಯಾವುದು ಕೈಗೂಡಲಿಲ್ಲ.