ವಿದ್ಯಾರ್ಥಿಯ ಅಪಹರಣ! ಮುಂದೆ ಏನಾಯ್ತು?

Webdunia
ಭಾನುವಾರ, 7 ನವೆಂಬರ್ 2021 (09:32 IST)
ಬೆಂಗಳೂರು : R.R.ನಗರದಲ್ಲಿ ವಿದ್ಯಾರ್ಥಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತರುಣ್ ಎಂಬ ವಿದ್ಯಾರ್ಥಿಯನ್ನು ಅಪಹರಿಸಿ ನಂತರ ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಾಸಿರ್, ಸೈಯದ್ ತಜ್ಮುಲ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರ್ವರು ಆರೋಪಿಗಳೂ ಕೂಡ ತರುಣ್ ತಂದೆ ಬಳಿಯೇ ಕೆಲಸ ಮಾಡುತ್ತಿದ್ದರು. ಹಣದಾಸೆಗಾಗಿ ತರುಣ್ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜರಾಜೇಶ್ವರಿ ಠಾಣೆ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಪ್ರಕರಣವೇನು?
ತರುಣ್ ಭಾರತಿನಗರದ ಮನೆಯಿಂದ ಪಟಾಕಿ ತರುವುದಾಗಿ ಹೇಳಿ ಹೋಗಿದ್ದರು. ಆದರೆ ಎರಡು ದಿನದ ನಂತರ ರಾಜರಾಜೇಶ್ವರಿ ನಗರ ರಾಜಕಾಲುವೆ ಬಳಿ ಚೀಲದಲ್ಲಿ ಹೆಣವಾಗಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ತರುಣ್ ತಂದೆಯ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳೇ ಆರೋಪಿಗಳು ಎಂದು ಸುಳಿವು ದೊರೆತ ನಂತರ ಬಂಧಿಸಿದ್ದಾರೆ. ತರುಣ್ ಮನೆಯಿಂದ ಹೋಗುವಾಗ ಆರೋಪಿಗಳನ್ನು ಬರುತ್ತೀರಾ ಎಂದು ಕರೆದು, ಕರೆದೊಯ್ದಿದ್ದ. ಡ್ರಗ್ಸ್ ನಶೆಯಲ್ಲಿದ್ದ ಆರೋಪಿಗಳು ಹಣದಾಸೆಗೆ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕಿರುಚಾಡದಂತೆ ಬಾಯಿಗೆ ಟೇಪ್ ಸುತ್ತಿದ್ದಾರೆ. ಮನೆಗೆ ಕರೆ ಮಾಡಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಾವಾಗ ವಿಚಾರ ಬಹಿರಂಗವಾಯಿತೋ ಆಗ ತರುಣ್ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ನಂತರ ಪ್ಲಾಸ್ಟಿಕ್ ಚೀಲಕ್ಕೆ ಸುತ್ತಿ, ರಾಜಕಾಲುವೆ ಬಳಿ ಬಿಸಾಕಿ ಪರಾರಿಯಾಗಿದ್ದರು. ನಗರದ ಬೇರೆ ಬೇರೆ ಭಾಗಗಳಲ್ಲಿ ತಲೆಮರೆಸಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಮೊದಲು ಪೋಷಕರು ಈ ಸುದ್ದಿ ಓದಲೇ ಬೇಕು

ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಮೊದಲು ಪೋಷಕರು ಈ ಸುದ್ದಿ ಓದಲೇ ಬೇಕು

ಬಿಗ್ ಶಾಕಿಂಗ್‌: ಬಸವರಾಜ್ ಬೊಮ್ಮಾಯಿ ಪಿಎ ಮಗ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ

ಪರಪ್ಪನ ಅಗ್ರಹಾರ ಜೈಲಿಗೆ ಶಾಸಕ ಬೈರತಿ ಬಸವರಾಜ್: ಜೈಲಿನಲ್ಲೇ ಅಗತ್ಯ ಚಿಕಿತ್ಸೆಗೆ ಸೂಚನೆ

ಯೂತ್ ಕಾಂಗ್ರೆಸ್ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ

ಮುಂದಿನ ಸುದ್ದಿ
Show comments