Publish Date: Thursday, 27 October 2022 (18:59 IST)
Updated Date: Thursday, 27 October 2022 (19:05 IST)
ಹಾಲಿನ ಪಾಕೇಟ್ ಕದ್ದ ಎಂದು ಆರೋಪ ಮಾಡಿ ನಡುಬೀದಿಯಲ್ಲಿ ಯುವಕನ ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ. ನರಸಿಂಹಮೂರ್ತಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಕೆಲ ಪುಂಡರ ಗುಂಪು ನರಸಿಂಹಮೂರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಶಿವರಾಜ್ ಕುಮಾರ್ ಎಂಬುವವನ ನೇತೃತ್ವದಲ್ಲಿ ಬಂದ ಗುಂಪು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ನರಸಿಂಹಮೂರ್ತಿ ಪತ್ನಿ ನಂದಿನಿ ಎಂಬುವರು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವರಾಜ್ ಕುಮಾರ್, ಆನಂದ್, ಕಮಲಾಕರರೆಡ್ಡಿ, ಲೋಕೇಶ್, ಗೋಪಾಲರೆಡ್ಡಿ, ಸುನೀಲ್ ಕುಮಾರ್ ಸೇರಿ 6 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.