Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಮಿಕ್ರಾನ್ ನಿಯಂತ್ರಣಕ್ಕೆ ಕಠಿಣ ಕ್ರಮ: 8 ರಾಜ್ಯಗಳು, 3 ಕೇಂದ್ರಾಡಳಿತ ನೈಟ್ ಕರ್ಫ್ಯೂ ಜಾರಿ

ಒಮಿಕ್ರಾನ್ ನಿಯಂತ್ರಣಕ್ಕೆ ಕಠಿಣ ಕ್ರಮ: 8 ರಾಜ್ಯಗಳು, 3 ಕೇಂದ್ರಾಡಳಿತ  ನೈಟ್ ಕರ್ಫ್ಯೂ ಜಾರಿ
bangalore , ಬುಧವಾರ, 29 ಡಿಸೆಂಬರ್ 2021 (20:26 IST)
webdunia
ದೇಶದ ಸದ್ದಿಲ್ಲದಂತಿದ್ದ ಒಮಿಕ್ರಾನ್ ಇದೀಗ ಎಲ್ಲರ ನಿದ್ದೆಗೆಡಿಸಿದೆ. ಒಮಿಕ್ರಾನ್ ನಿಯಂತ್ರಣ ಹಿನ್ನೆಲೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ.
 
ಕರ್ನಾಟಕ, ಉತ್ತರಪ್ರದೇಶ,ಮಧ್ಯಪ್ರದೇಶ, ಅಸ್ಸಾಂ, ಕೇರಳ, ಹರಿಯಾಣ, ಉತ್ತರಾಖಂಡ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಾದ್ರಾ ಮತ್ತು ನಗರ್ ಹವೇಲಿ, ದಿಯು ಮತ್ತು ದಾಮನ್‌ನಲ್ಲಿಯೂ ನೈಟ್ ಕರ್ಫ್ಯೂ ಜಾರಿಯಾಗಿದೆ.
 
ರಾಜ್ಯದಲ್ಲಿಯೂ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿದೆ, ಇನ್ನೂ ಹತ್ತು ದಿನಗಳು ಇರಲಿದೆ. ಅನಗತ್ಯ ಓಡಾಟಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಅನಾವಶ್ಯಕವಾಗಿ ಪತ್ತೆಯಾದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ವಾಹನಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ತುರ್ತು ಪರಿಸ್ಥಿತಿ, ನೈಟ್ ಡ್ಯೂಟಿ ಮಾಡುವವರು ಸೂಕ್ತ ದಾಖಲೆಗಳೊಂದಿಗೆ ಪ್ರಯಾಣಿಸುವುದಿಲ್ಲ. ಇದನ್ನು ಯಾರಿಗೂ ರಾತ್ರಿ 10 ರ ನಂತರ ಓಡಾಟಕ್ಕೆ ಅನುಮತಿ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಿಂದ ಮೈಸೂರು ಪ್ರವೇಶದ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ