ಬೃಹತ್ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರೋ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಅಡ್ಡಿಗಳೇ ಎದುರಾಗುತ್ತಿವೆ.
ರಾಮನಗರದ ಕಪಾಲಿ ಬೆಟ್ಟವನ್ನು ಏಸು ಬೆಟ್ಟವಾಗಿ ಅಭಿವೃದ್ಧಿಪಡಿಸಿ ಅದರಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ.
ಇದೀಗ ಡಿಕೆಶಿ ವಿರುದ್ಧ ಜನೇವರಿ 13 ರಂದು ಭಾರೀ ಪ್ರತಿಭಟನೆ ಮಾಡ್ತೇವೆ ಅಂತ ಹಿಂದೂ ಜಾಗರಣಾ ವೇದಿಕೆ ರಾಜ್ಯ ಮುಖಂಡ ಕುಮಾರ ಸುಬ್ರಹ್ಮಣ್ಯ ಹೇಳಿದ್ದಾರೆ.
ವೋಟ್ ಬ್ಯಾಂಕ್ ಗಾಗಿ ಡಿಕೆಶಿ ಮಾಡ್ತಿರೋ ಕೆಲಸ ಕೈ ಬಿಡಬೇಕು. ಸರಕಾರವು ಕಪಾಲಿ ಬೆಟ್ಟದಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಲು ಆಗ್ರಹ ಮಾಡಲಾಗುತ್ತದೆ ಅಂತ ಹೇಳಿದ್ದಾರೆ.