Publish Date: Mon, 26 Apr 2021 (09:21 IST)
Updated Date: Mon, 26 Apr 2021 (09:23 IST)
ಬೆಂಗಳೂರು: ವಾರಂತ್ಯದ ಲಾಕ್ ಡೌನ್ ಗೆ ಸಿಕ್ಕ ಯಶಸ್ಸಿನ ಬಳಿಕ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸಲು ಇನ್ನೂ 15 ದಿನ ಲಾಕ್ ಡೌನ್ ಮಾಡಬೇಕಾ ಬೇಡವೇ ಎಂಬುದಾಗಿ ಇಂದು ತೀರ್ಮಾನ ತೆಗೆದುಕೊಳ್ಳಲಿದೆ.
ಆರಂಭದಲ್ಲಿ ಲಾಕ್ ಡೌನ್ ಗೆ ಜನರ ವಿರೋಧ ವ್ಯಕ್ತವಾಗಿದ್ದರಿಂದ ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ತರಲು ಹಿಂಜರಿದಿತ್ತು. ಆದರೆ ಈಗ ವಾರಂತ್ಯದ ವೀಕೆಂಡ್ ಯಶಸ್ವಿಯಾಗಿರುವುದರಿಂದ ಮಿತಿ ಮೀರುತ್ತಿರುವ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಗೆ ತರಲು ಚಿಂತನೆ ನಡೆಸಿದೆ.
ಈ ಬಗ್ಗೆ ಇಂದು ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ತಜ್ಞರ ಅಭಿಪ್ರಾಯ, ಜನರ ಅಭಿಪ್ರಾಯಗಳನ್ನು ಪರಿಗಣಿಸಿ ಲಾಕ್ ಡೌನ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.