ಬೆಂಗಳೂರು: ಮಠ ಹಾಗೂ ಮಠದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದ್ದ ರಾಜ್ಯ ಸರ್ಕಾರ ತೀವ್ರ ವಿರೋಧದ ಹಿನ್ನಲೆಯಲ್ಲಿ ಸುತ್ತೋಲೆ ವಾಪಸ್ ಪಡೆದಿದೆ.
ಈ ಮಸೂದೆ ಮಂಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದಂತೆ ಭಾರೀ ವಿರೋಧ ವ್ಯಕ್ತವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಇಂತಹದ್ದೊಂದು ಎಡವಟ್ಟು ಮಾಡಿಕೊಂಡು ಸರ್ಕಾರ ಹಿಂದೂ ಸಮುದಾಯದ ವಿರೋಧ ಕಟ್ಟಿಕೊಳ್ಳಲು ಹೊರಟಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ.
ಮೂಲಗಳ ಪ್ರಕಾರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಕೆಲವು ಸ್ವಾಮೀಜಿಗಳು ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಸಮ್ಮುಖದಲ್ಲೇ ಸರ್ಕಾರದ ನಿರ್ಧಾರಕ್ಕೆ ಛೀಮಾರಿ ಹಾಕಿದರು ಎನ್ನಲಾಗಿದೆ.
ಮಠ, ದೇವಾಲಯಗಳಿಗೆ ರಾಜಕೀಯ ಬೆರೆಸುವುದಕ್ಕೆ ನಮ್ಮ ಸಹಮತವಿಲ್ಲ ಎಂದು ಹೆಗ್ಗಡೆ ಸೇರಿದಂತೆ ಹಲವರು ಕಟುವಾಗಿ ಮಾತನಾಡಿದರು ಎನ್ನಲಾಗಿದೆ. ಅತ್ತ ಪೇಜಾವರ ಶ್ರೀಗಳಿಂದಲೂ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ಎಲ್ಲಾ ಹಿನ್ನಲೆಯಲ್ಲಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ