ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದಾರೆ .
ಈ ವೇಳೆ ಅವರು ಕೇಂದ್ರದಿಂದ ಅನುದಾನ ಕಡಿತವಾದ ಹಿನ್ನಲೆಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಅಲ್ಲದೇ ಈಗಿರುವ ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ, ಸೇರಿದಂತೆ ಪ್ರಮುಖ ಯೋಜನೆಗಳು ಮುಂದುವರಿಯಿವುದಾಗಿ ತಿಳಿಸಿದ್ದಾರೆ.