Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ಭರ್ಜರಿ ಕೊಡುಗೆ

ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ಭರ್ಜರಿ ಕೊಡುಗೆ
ಬೆಂಗಳೂರು , ಗುರುವಾರ, 5 ಮಾರ್ಚ್ 2020 (11:56 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದು, ಇದರಲ್ಲಿ  ಬೆಂಗಳೂರು ನಗರಕ್ಕೆ ಭರ್ಜರಿ ಕೊಡುಗೆ  ನೀಡಿದ್ದಾರೆ.

ನವನಗರೋತ್ಥಾನ ಯೋಜನೆಗೆ 8,344 ಕೋಟಿ ಮೀಸಲು, ಬೆಂಗಳೂರಿನ ಸುತ್ತಲಿನ 110 ಹಳ್ಳಿಗಳಿಗೆ 2 ವರ್ಷಕ್ಕೆ 1000 ಕೋಟಿ ರೂ, ಮೀಸಲು, 2020-21 ಸಾಲಿಗೆ 500ಕೋಟಿ ರೂಪಾಯಿ ಮೀಸಲಿಡಲಾಗಿದೆ.ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಏರ್ ಪೋರ್ಟ್ ವರೆಗೆ   ಒಟ್ಟು 56 ಕಿಲೋ ಮೀಟರ್ ಔಟರ್ ರಿಂಗ್ ರೋಡ್  ಗೆ 14,500 ಕೋಟಿ ರೂ.ಮೀಸಲು, ಬಿಎಂಟಿಸಿಗೆ 1500 ಬಸ್ ಗಳ ಖರೀದಿಗೆ 600 ಕೋಟಿ ರೂ, ಮೀಸಲು.

 

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಸಂಪರ್ಕಕ್ಕೆ ಯೋಜನೆ. ಟ್ರಾಫಿಕ್ ಕಡಿಮೆ ಮಾಡಲು ಇಂಟಿಗ್ರೇಟೆಡ್ ಮಲ್ಟಿ ಮಾಡೆಲ್ ಟ್ರಾನ್ಸ್ ಪೋರ್ಟ್ ಹಬ್  ಸ್ಥಾಪನೆ, ರಸ್ತೆ ಅಪಘಾತ ತಡೆಗೆ 200 ಕೋಟಿ ರೂ ಮೀಸಲು. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಅಂಡರ್ ಗ್ರೌಂಡ್ ವಾಹನ ಪಾರ್ಕಿಂಗ್ ವ್ಯವಸ್ಥೆ,  ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 8,772 ಕೋಟಿ ಮೀಸಲಿಡಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಜ್ಯ ಬಜೆಟ್ ಮಂಡನೆ; ಕೃಷಿಗೆ ಬಂಪರ್ ಆಫರ್ ನೀಡಿದ ಸಿಎಂ