Publish Date: Sun, 28 Jan 2024 (14:21 IST)
Updated Date: Sun, 28 Jan 2024 (14:24 IST)
ಬೆಂಗಳೂರು-ಇಂದು ರಾಜ್ಯ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಹಿನ್ನಲೆ ಪುರುಷ ಹುದ್ದೆಗಳ ನೇಮಕಾತಿಗಾಗಿ ರಾಜ್ಯಾದ್ಯಂತ ಹಾಗೂ ಬೆಂಗಳೂರು ನಗರದಲ್ಲಿ ಪರೀಕ್ಷೆ 78 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಸುಮಾರು ಬೆಂಗಳೂರಿನಲ್ಲಿ 42740 ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಬರೆಯಲಿದ್ದಾರೆ.ರಾಜ್ಯಾದ್ಯಂತ ಸುಮಾರು 4 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.3064 ಹುದ್ದೆಗಳು ಖಾಲಿಯಿದ್ದು,ಸಿಎಆರ್ /ಡಿಎಆರ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ.ಬೆಂಗಳೂರಿನ ಚಾಲುಕ್ಯ ಸರ್ಕಲ್ ನ ಆರ್ .ಸಿ.ಕಾಲೇಜ್ ನಲ್ಲಿ ಪರೀಕ್ಷೆ ನಡೆಯುತ್ತಿದೆ.
ಚಳಿಯಲ್ಲೇ ಕಾಲೇಜ್ ಮುಂದೆ ಬಂದು ಅಭ್ಯರ್ಥಿಗಳು ನಿಂತಿದ್ದಾರೆ.ಇಂದು ಪರೀಕ್ಷೆ ಬರೆಯಲು ಬೆಳಗಾವಿ,ಕೊಪ್ಪಳ,ಯಾದಗಿರಿ,ಬಿಜಾಪುರ ,ಕಲ್ಬುರ್ಗಿ ,ಚಿತ್ರದುರ್ಗ ಹಲವು ಜಿಲ್ಲೆಗಳಿಂದ ಅಭ್ಯರ್ಥಿಗಳು ಬಂದಿದ್ದಾರೆ. ಉತ್ತರ ಕರ್ನಾಟಕದಿಂದ ಸಾವಿರಾರು ಅಭ್ಯರ್ಥಿಗಳು ಬಂದಿದ್ದಾರೆ.ಪರೀಕ್ಷೆ ಅಕ್ರಮ ತಪ್ಪಿಸಲು ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪರೀಕ್ಷೆ ನಡೆಯುತ್ತಿದ್ದು,2022 ರಲ್ಲಿ ಕಾನ್ಸ್ ಟೇಬಲ್ ನೇಮಕಾತಿಗೆ ಅಧಿಸೂಚನೆ ಸರ್ಕಾರ ಹೊರಡಿಸಿದೆ.ಬಳಿಕ ಪಿಎಸ್ ಐ ಹಗರಣದ ನಂತ್ರ ಎಕ್ಸಾಂ ನಡೆಸಿರಲಿಲ್ಲ ಹೀಗಾಗಿ ಇಂದು ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆ ನಡೆಯುತ್ತಿದೆ.
geetha
Publish Date: Sun, 28 Jan 2024 (14:21 IST)
Updated Date: Sun, 28 Jan 2024 (14:24 IST)