Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ ಇದೆ. 2 ತಿಂಗಳ ಮಟ್ಟಿಗೆ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ, ಪಿಯು ಮಂಡಳಿಗೆ ಪರೀಕ್ಷಾ ವೇಳಾಪಟ್ಟಿ ತಯಾರಿಗೆ ಸೂಚಿಸಿತ್ತು. ಸದ್ಯ ವೇಳಾಪಟ್ಟಿ ತಯಾರಿ ಬೇಡ ಎಂದು ಸೂಚನೆ ನೀಡಿದೆ. 2 ತಿಂಗಳ ಮಟ್ಟಿಗೆ ಪರೀಕ್ಷೆ ಮುಂದೂಡಲು ಶಿಕ್ಷಣ ಇಲಾಖೆಗೆ ಕೋವಿಡ್ ತಜ್ಞರ ಸಮಿತಿ ಸಲಹೆ ನೀಡಿದ್ದಾರೆ. ಹಾಗೇ ಬೇಸಿಗೆ ರಜೆಯನ್ನೂ ಕಡಿತಗೊಳಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.