ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ತಾತ್ಕಾಲಿಕವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಬರುವ ಮಾರ್ಚ್ 20 ರಿಂದ ಏಪ್ರಿಲ್ 3 ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯಲಿದೆ.
ನವೆಂಬರ್ 19 ರ ತನಕ ಆಕ್ಷೇಪಣೆ ಸಲ್ಲಿಕೆ ಮಾಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಅವಕಾಶ ಕಲ್ಪಿಸಿದೆ.
ಎಸ್ ಎಸ್ ಎಲ್ ಸಿ ವೇಳಾಪಟ್ಟಿ ವಿವರ:
ಮಾರ್ಚ್ 20 – ಪ್ರಥಮ ಭಾಷೆ ವಿಷಯಗಳು, ಮಾರ್ಚ್ 21 – ಕೋರ್ ಸಬ್ಜೆಕ್ಟ್ (ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ), ಮಾರ್ಚ್ 23- ಸಮಾಜ ವಿಜ್ಞಾನ, ಮಾರ್ಚ್ 26 – ವಿಜ್ಞಾನ, ಮಾರ್ಚ್ 30 – ಗಣಿತ, ಏಪ್ರಿಲ್ 1 – ದ್ವಿತೀಯ ಭಾಷೆ ವಿಷಯಗಳು, ಏಪ್ರಿಲ್ 3 – ತೃತೀಯ ಭಾಷೆಯ ವಿಷಯಗಳ ಪರೀಕ್ಷೆ.