ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಆಹ್ವಾನ ನೀಡದಿರುವ ಬಿಜೆಪಿ ಹಿರಿಯ ಮುಖಂಡರ ವರ್ತನೆಯಿಂದ ಬೇಸರಗೊಂಡಿರುವ ಬಿದೆಪಿ ಮುಖಂಡ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಇಷ್ಟು ಬೇಗ ಮೂಲೆಗುಂಪು ಮಾಡ್ತಾರೆ ಅಂದ್ಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷವಷ್ಟೆ ಬಿಜೆಪಿ ಮುಖಂಡರು ನನ್ನ ಮನೆಗೆ ಬಂದು ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು. ಆದರೆ, ಕೇವಲ ಒಂದೇ ವರ್ಷದೊಳಗೆ ನನ್ನನ್ನು ಮರೆತುಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ದಲಿತ ನಾಯಕರು ಬೇಡ್ವಾ? ದಲಿತ ನಾಯಕರಿಗೆ ಪಕ್ಷದಲ್ಲಿ ಸ್ಥಾನಮಾನವಿಲ್ಲವಾ? ಇಷ್ಟು ಬೇಗ ದಲಿತ ಮುಖಂಡರನ್ನು ಮೂಲೆಗುಂಪು ಮಾಡ್ತಾರೆ ಅಂದ್ಕೊಂಡಿರಲಿಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಯಾವುದೇ ಮುಖಂಡರು ಯಾತ್ರೆಗೆ ಬರುವಂತೆ ನನಗೆ ಆಹ್ವಾನ ನೀಡಿಲ್ಲ. ಬಿಜೆಪಿ ನಾಯಕರ ಬಗ್ಗೆ ಬಹಳಷ್ಟು ಗೌರವವಿತ್ತು. ಆದರೆ, ಹಲವು ದಶಕಗಳ ಕಾಲ ಶಾಸಕನಾಗಿ, ಸಚಿವನಾಗಿ ಸೇವೆ ಸಲ್ಲಿಸಿದ ದಲಿತ ಮುಖಂಡನನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.