ವಾಲ್ಮಿಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ವಾಲ್ಮಿಕಿ ರಾಮಾಯಾಣದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಪ್ರೊ.ಕೆ.ಎಸ್.ಭಗವಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ವಿಶಿಷ್ಠ ಕವಿಗೋಷ್ಠಿಯ ವೇಳೆ ಮಾತನಾಡಿದ ಸಾಹಿತಿ ಭಗವಾನ್, ವಾಲ್ಮಿಕಿ ರಾಮಾಯಣದಲ್ಲಿ ರಾಮನ ನಿಜರೂಪ ತಿಳಿದಿದೆ. ಅಂದ ಮೇಲೂ ರಾಮ ಮಂದಿರ ನಿರ್ಮಿಸುವುದು ಯಾತಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.
ಬ್ರಾಹ್ಮಣರ ಮಾತುಗಳನ್ನು ಕೇಳಿ ರಾಮ, ಶಂಭೂಕನ ತಲೆಯನ್ನು ಕತ್ತರಿಸಿದ. ತುಂಬು ಗರ್ಭಿಣಿಯನ್ನು ಕಾಡಿಗೆ ಕಳುಹಿಸಿದ. ಇಂತಹ ವ್ಯಕ್ತಿಗೆ ದೇವಾಲಯ ನಿರ್ಮಿಸಬೇಕೆ? ರಾಮಮಂದಿರ ನಿರ್ಮಿಸುವ ಮೊದಲ ಯೋಚಿಸಿ ಎಂದು ಸಲಹೆ ನೀಡಿದ್ದಾರೆ.
ಪತ್ನಿಯನ್ನು ಗೌರವಿಸದಂತಹ ವ್ಯಕ್ತಿಯಾದ ರಾಮನಿಗೆ ದೇವಾಲಯ ಕಟ್ಟಲು ಹೊರಟಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಪ್ರೊಫೆಸರ್ ಕೆ.ಎಸ್.ಭಗವಾನ್ ಮತ್ತೊಮ್ಮೆ ವಿವಾದದ ಕಿಡಿ ಹಬ್ಬಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.