ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋದಿಸಿ ಇಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿ ವಿನೂತನವಾಗಿ ಪ್ರತಿಭಟಿಸುವ ಮೂಲಕ ಅಸಾಮಾಧನ ವ್ಯಕ್ತ ಪಡಿಸಿದೆ. ಉಡುಪಿಯ ಹಳೆ ಡಯಾನ ಸರ್ಕರ್ಲ್‍ನಿಂದ ಚಿತ್ತರಂಜನ್ ಸರ್ಕಲ್‍ನವೆರೆಗೆಎತ್ತಿನಗಾಡಿ ಹಾಗೂ ಸೈಕಲ್‍ನ್ನು ಬಳಕೆ ಮಾಡುವ ಮೂಲಕ ಸಮಿಶ್ರ ಸರಕಾರದ ಬೆಲೆ ಏರಿಕೆಯ ಬಗ್ಗೆ ಪ್ರತಿಭಟನಕಾರರು ಆಕ್ರೋಶವ್ಯಕ್ತ ಪಡಿಸಿದ್ರು. ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಈ ಸಂದರ್ಭ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ರು, ಕೇಂದ್ರ ಸರಕಾರ ಇಂದನ ಬೆಲೆ ಏರಿಕೆ ಮಾಡಿದಾಗ ಟೀಕೆ ಮಾಡುತ್ತಿದ್ದ ಈ 2 ಪಕ್ಷಗಳು ಈಗ ಇಂದನದ ಬೆಲೆ ಏರಿಕೆ ಮಾಡಿದೆ. ಬುದ್ದಿವಂತರ ಜಿಲ್ಲೆ ಎಂಬ ಹಣ್ಣೆ ಪಟ್ಟಿಕೊಂಡಿರುವ ಉಡುಪಿ ಜಿಲ್ಲೆಗೆ ಬಜೆಟ್‍ನಲ್ಲಿ ಯಾವುದೇ ಘೋಷಣೆ ಮಾಡದೇ ಸಮಿಶ್ರ ಸರಕಾರ ಮಲತಾಯಿ ಧೋರಣೆ ತಾಳಿದೆ. ವಿದ್ಯುತ್ಚಕ್ತಿಯ ಬೆಲೆ ಇಗಾಗಲೇ ಗಗನಕ್ಕೆ ಏರಿಕೆಯಾಗಿದ್ದು ಗಾಯದ ಮೇಲೆ ಉಪ್ಪು ಸುರಿದಂತೆ ಮತ್ತೇ ವಿದ್ಯುತ್ಚಕ್ತಿಯ ದರವನ್ನು ಏರಿಕೆ ಮಾಡಿದೆ.
ಸರಕಾರ ಈ ಕೂಡಲೇ ತನ್ನ ನಿರ್ದಾರದಿಂದ ದೂರ ಸರಿಯಬೇಕು.ಉಡುಪಿ ಜಿಲ್ಲೆಗೆ ವಿಶೇಷ ಯೋಜನೆಯನ್ನು ಬಜೆಟ್‍ನಲ್ಲಿ ಮರು ಸೇರ್ಪಡಿಸಬೇಕು. ಇಂದನ ಮತ್ತು ವಿದ್ಯುತ್ ಚ್ಚಕ್ತಿ ಬೆಲೆ ಏರಿಕೆಯನ್ನು ಕೈ ಬಿಡಬೇಕು.ಇಲ್ಲವಾದ್ದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ರು. ಸಮಾಜ ಸೇವಕ ತಾರನಾಥ ಮೇಸ್ತಾ ಹಾಗೂ ರಿಕ್ಷಾ ಚಾಲಕರುಪ್ರತಿಭಟನೆಗೆ ಸಾಥ್ ನೀಡಿದ್ರು.