ತಮಿಳುನಾಡಿನ ಕನೂರು ಬಳಿ ಹೆಲಿಕಾಪ್ಟರ್ ದುರಂತ ದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಿನ್ನೆ ನಿಧನರಾದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು.
ನಿರ್ಣಯದ ಪರವಾಗಿ ಮಾತನಾಡಿದ ಕಾಗೇರಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿದ್ದ ವರುಣ್ ಸಿಂಗ್ ಅವರು ದಕ್ಷ ಮತ್ತು ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದರು.
2014ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರ್ಪಡೆಯಾದ ಅವರು, ಸೇವೆಯುದ್ದಕ್ಕೂ ಪ್ರಾಮಾಣಿಕತೆ ಮೆರೆದವರು. ಸುಮಾರು 10 ಸಾವಿರ ಅಡಿ ಎತ್ತರದಲ್ಲಿ ಎಲ್‍ಸಿಎ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ತೊಂದರೆಗೊಳಗಾಗಿತ್ತು. ಆ ಸಂದರ್ಭದಲ್ಲಿ ಅವರು ಧೃತಿಗೆಡದೆ ಹೆಲಿಕಾಪ್ಟರ್‍ನ್ನು ಯಶಸ್ವಿಯಾಗಿ ಕೆಳಗಿಳಿಸಿದ್ದರು.
ಅವರ ಸೇವೆಯನ್ನು ಮೆಚ್ಚಿ ಶೌರ್ಯ ಚಕ್ರ ನೀಡಲಾಗಿತ್ತು. ದೇಶವು ಒಬ್ಬ ೀರ ಯೋಧನನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದರು. ಮೃತರ ಗೌರವಾರ್ಥವಾಗಿ ಸದನದಲ್ಲಿ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.