Select Your Language

Notifications

webdunia
webdunia
webdunia
webdunia

ಅನುದಾನ ಕೊಡದೇ ಅಭಿವೃದ್ಧಿ ಹೇಗೆ? ಸಭಾಪತಿ ಮುಂದೆ ಶಾಸಕರ ಅಳಲು

Speaker basavaraja hottete meeting with mlas
ಅನುದಾನ ನೀಡದೇ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಹೇಗೆ ಎಂದು ಶಾಸಕರು ಸರ್ಕಾರದ ಅನುದಾನ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ವಿಚಾರವಾಗಿ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆಯಲ್ಲಿ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಹೊರಟ್ಟಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳೋದಾದ್ರೆ ಜಿಲ್ಲಾಧಿಕಾರಿಗಳು ಕಿರುಕುಳ ಕೊಡುತ್ತಾರೆ ಎಂದರು.
ಜಿಲ್ಲಾಧಿಕಾರಿಗಳು ಅನುದಾನ ಹಂಚಿಕೆಯಲ್ಲಿ ಅಡ್ಡ ಬರ್ತಾರೆ ಎಂಬ ಆರೋಪ ಬರುತ್ತಾ ಇದೆ. ಪ್ರತಿವರ್ಷ 700 ಕೋಟಿ ಬಜೆಟ್ ನಲ್ಲಿ ಮೀಸಲಿಡಲಾಗುತ್ತೆ. ಆದರೂ ಈ ರೀತಿ ಸಮಸ್ಯೆಗಳಾಗೋದ್ರಿಂದ ಈಗಾಗಲೇ ಎಲ್ಲಾ ಶಾಸಕರು ಸಲಹೆಗಳನ್ನು ನೀಡಿದ್ದಾರೆ. ಹಾಗಾಗಿ ಇನ್ನೊಂದು ಸಾರಿ ಸಭೆ ಕರೆದು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಆಗಸ್ಟ 14 ರೊಳಗೆ ಅನುದಾನ ಬಿಡುಗಡೆ ಮಾಡಿಸೋಕೆ ಪ್ರಯತ್ನ ಮಾಡ್ತೀನಿ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ಪಿಯಿಂದ ಯಾರೇ ಹೊರ ಹೋದರೂ ಕಸ, ಕಸದ ಬುಟ್ಟಿ ಸೇರಿದಂತೆ