ಕುಂದಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕೇರಳ, ಕೊಡಗು ನೆರಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಕಾರ್ಯ ನಡೆಯಿತು.
ಆರ್.ಎಸ್.ಎಸ್. ಸ್ವಯಂಸೇವಕರು ಪೇಟೆಯ ಪ್ರತಿ ಅಂಗಡಿಗಳಿಗೆ ತೆರಳಿ ಅವರು ನೀಡಿದ ಧನಸಹಾಯ ಹಾಗೂ ಬಟ್ಟೆ, ದಿನೋಪಯೋಗಿ ವಸ್ತುಗಳನ್ನು ಸಂಗ್ರಹಿಸಿದರು. ಅಕ್ಕಿ, ಹೊಸಬಟ್ಟೆ, ನೀರಿನ ಬಾಟಲಿಗಳು, ದವಸ ಧಾನ್ಯ ಮೊದಲಾದವುಗಳನ್ನು ಜನರು ಈ ವೇಳೆ ನೀಡಿದ್ದು ಕುಂದಾಪುರದಿಂದ ಉಡುಪಿ ಮೂಲಕ ಮಂಗಳೂರು ವಿಭಾಗಕ್ಕೆ ಕಳುಹಿಸಿ ಕೊಡಗು ಹಾಗೂ ಕೇರಳಕ್ಕೆ ರವಾನಿಸಲಾಗುತ್ತದೆ.
ಈ ಸಂದರ್ಭ ಆರ್.ಎಸ್.ಎಸ್. ತಾಲೂಕು ಸಹಕಾರ್ಯವಾಹ ವಿಕ್ರಮ್ ಕುಂದಾಪುರ, ನಗರ ವ್ಯವಸ್ಥಾ ಪ್ರಮುಖ್ ಅರುಣ್ ಖಾರ್ವಿ, ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ಮಹೇಶ್ ಕುಮಾರ್ ಪೂಜಾರಿ ಹಳೆಅಳಿವೆ, ಹಿಂಜಾವೇ ನಗರ ಸಂಚಾಲಕ ಅನಿಲ್, ಸುಶಾಂತ್ ಕುಂದಾಪುರ, ಭಾರತೀಯ ಮಜ್ದೂರ್ ಸಂಘದ ಸುರೇಶ್ ಕುಂದಾಪುರ ಮೊದಲಾದವರು ಇದ್ದರು.