ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮೆಟ್ರೋ ನಿಲ್ದಾಣದ ಬಳಿ ಎಲೆಕ್ಟ್ರಿಕ್ ವಾಹನದಿಂದ ಕಲಾಕೃತಿ ನಿರ್ಮಾಣಮಾಡಲಾಗಿದೆ.ತ್ರಿಚಕ್ರದ ಆರ್ಟ್ ಇನ್‌ಸ್ಟಾಲೇಶನ್‌ನ ವಿಶೇಷತೆ .ಇದನ್ನು ಅಪ್‌ಸೈಕಲ್ ಮಾಡಿದ ವಸ್ತುಗಳಿಂದ ಮಾಡಲಾಗಿದೆ.ನಗರದ ಐಟಿ ಕಂಪನಿಗಳ ಉದ್ಯೋಗಿಗಳು ಮೂವಿಂಗ್ ಎಂಬ ಈ ಕಲೆಯನ್ನು ಮಾಡಿದ್ದಾರೆ.
ಬೆಂಗಳೂರಿನ ಜನರು ತಮ್ಮ ಆನ್‌ಲೈನ್ ಡೆಲಿವರಿ ಮಾಡುವ ಉದ್ಯೋಗಿಗಳ ಬಗ್ಗೆ ಇದರ ಪ್ಯಾಕೇಜ್‌ಗಳ ಪ್ರಯಾಣದ ಬಗ್ಗೆ ಯೋಚಿಸಲು ಈ ಕಲಾಕೃತಿ ಮಾಡಲಾಗಿದೆ.ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚಿತ್ತಾಕರ್ಷಕ ಕಲಾಕೃತಿಯನ್ನು ರೂಪಿಸಲಾಗಿದ್ದು,ಗುಜರಿ ಸಾಮಗ್ರಿಗಳಿಗೆ ಹೊಳಪು ನೀಡಿ ಎಲೆಕ್ಟ್ರಿಕ್ ವಾಹನದ ಪ್ರತಿಕೃತಿಯೊಂದನ್ನು ನಿರ್ಮಾಣ ಮಾಡಲಾಗಿದೆ.ಇದು ಸೌರಶಕ್ತಿಯ ನೆರವಿನಿಂದ ಕಾರ್ಯನಿರ್ವಹಿಸುತ್ತದೆ.