Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಸಾಮರಸ್ಯ ಕೆಡಿಸುವಂಥ ಸಂಗತಿಗಳು ಆಗಾಗ ಪೋಸ್ಟ್ ಆಗುತ್ತಿರುತ್ತವೆ. ಅಂಥದ್ದೇ ಒಂದು ಸಂಗತಿಯನ್ನು ಫೇಸ್ಬುಕ್ನಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಟ್ಟಣ ನೇಮನ್ (20) ಬಂಧಿತ ಆರೋಪಿ. ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಈತ ಈದ್ ಮಿಲಾದ್ ಆಚರಣೆಯ ದೃಶ್ಯಗಳ ಫೋಟೋ ಪೋಸ್ಟ್ ಮಾಡಿಕೊಂಡು ಅವಹೇಳನಕಾರಿ ಪೋಸ್ಟ್ ಹಾಕಿದ್ದ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಮರು ರಸ್ತೆಯುದ್ದಕ್ಕೂ ಬಣ್ಣದ ತೋರಣಗಳನ್ನು ಕಟ್ಟಿದ್ದರ ವಿಡಿಯೋ ಹಂಚಿಕೊಂಡಿದ್ದ ಈತ 'ಬಾಗೂರು ರೋಡ್ ಮಿನಿ ಪಾಕಿಸ್ತಾನ, ಈದ್ ಮಿಲಾದ್..' ಎಂದು ಪೋಸ್ಟ್ ಮಾಡಿಕೊಂಡಿದ್ದ. ಈತನನ್ನು ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.