Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಿದೆ. ಇದೀಗ ಈ ಸಂಘಟನೆಗಳ ಟ್ವಿಟರ್ ಖಾತೆಯನ್ನು ತಡೆಹಿಡಿಯಲು ನಿರ್ಧರಿಸಿದೆ. ಜತೆಗೆ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಖಾತೆಗೂ ನಿರ್ಬಂಧ ಹೇರಲಾಗಿದೆ.
ಪಿಎಫ್ಐ ಸಂಘಟನೆ @PFIofficial ಹೆಸರಿನಲ್ಲಿ ಟ್ವಿಟರ್ ಖಾತೆಯ ಮೂಲಕ 81,000 ಫಾಲೋವರ್ಸ್ಗಳನ್ನು ಹೊಂದಿತ್ತು
ಕೇಂದ್ರ ಸರ್ಕಾರ ಪಿಎಫ್ಐನ್ನು ಬ್ಯಾನ್ ಮಾಡಿದ ಒಂದು ದಿನದ ಅಂತರದಲ್ಲಿ, ಅದರ ಸಾಮಾಜಿಕ ಜಾಲತಾಣದ ಖಾತೆಗಳಿಗೂ ನಿರ್ಬಂಧ ವಿಧಿಸುವ ಕೆಲಸ ನಡೆದಿದೆ. ಭಯೋತ್ಪಾದನಾ ಚಟುವಟಿಕೆಗಳ ಜತೆಗೆ ಸಂಬಂಧ ಹೊಂದಿತ್ತು ಎಂಬ ಕಾರಣಕ್ಕೆ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ.