Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಲೋ ಸಿಟಿಯನ್ನಾಗಿ ಮಾಡ್ತಿದೆ ಸ್ಮಾರ್ಟ್ ಸಿಟಿಯ ಕಾಮಗಾರಿ..!

ಸ್ಲೋ ಸಿಟಿಯನ್ನಾಗಿ ಮಾಡ್ತಿದೆ ಸ್ಮಾರ್ಟ್ ಸಿಟಿಯ ಕಾಮಗಾರಿ..!
bangalore , ಶನಿವಾರ, 28 ಮೇ 2022 (20:42 IST)
ಸ್ಮಾರ್ಟ್ ಸಿಟಿ ಬೆಂಗಳೂರನ್ನ ಫುಲ್ ಸ್ಮಾರ್ಟ್ ಮಾಡ್ತೀವಿ.. ಸಿಲಿಕಾನ್ ಸಿಟಿಯ ಅಂದವನ್ನ ಹೆಚ್ಚಿಸ್ತೀವಿ ಅಂತ ಸ್ಮಾರ್ಟ್ ಸಿಟಿ ಓವರ್ ಆಗಿ ಬಿಲ್ಡಪ್ ಕೊಡ್ತಿತ್ತು. ಆದ್ರೆ, ಕಾಮಗಾರಿಯ ಅಸಲಿಯತ್ತು ಆಮೆಗತಿಯಲ್ಲಿ ಸಾಗ್ತಿದೆ. ಇದರ ವಿರುದ್ಧ ಜನ ಕೆಂಡಾಮಂಡಲಗೊಂಡಿದ್ದಾರೆ.ಬೆಂಗಳೂರಲ್ಲಿ ಓಡಾಡೋಕೆ ಒಂದು ರಸ್ತೆಯಿಲ್ಲ. ಪಾದಾಚಾರಿಗಳಿಗೆ ಫುಟ್ ಪಾತ್ ಇಲ್ಲ ಅನ್ನೋ ಕೂಗು ಈಗಲೂ ಇದೆ. ಕೇಂದ್ರ ಸರ್ಕಾರದ ಯೋಜನೆಯಡಿ ಸಿಲಿಕಾನ್ ಸಿಟಿಯನ್ನ ಸ್ಮಾರ್ಟ್ ಮಾಡೋಕೆ ಸ್ಮಾರ್ಟ್ ಸಿಟಿ ಮುಂದಾಗಿದೆ‌. ಆದ್ರೆ ವರ್ಷಗಳು ಉರುಳುತ್ತಿವೆ, ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ ಅನ್ನೋ ಕೂಗು ಈಗ ಜೋರಾಗಿದೆ. ಹೌದು.. ಬೆಂಗಳೂರಿನ ಹಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಪಾದಾಚಾರಿ ರಸ್ತೆ,  ವೈಟ್ ಟ್ಯಾಪಿಂಗ್ ರೋಡ್ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನ ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಆದ್ರೆ, ಕಳೆದ 1 ವರ್ಷದಿಂದಲೂ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ನಿತ್ಯ ಲಕ್ಷಾಂತರ ಜನ ಭೇಟಿ ನೀಡುವ ಪ್ರದೇಶಗಳಲ್ಲಿ ಒಂದೂವರೆ ವರ್ಷ‌ ಕಳೆದ್ರೂ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ಮುಗಿಸೋದಾಗಿ ನಾಲ್ಕೈದು ಬಾರಿ ಡೆಡ್ ಲೈನ್ ನೀಡಿ ಸ್ಮಾರ್ಟ್ ಸಿಟಿ ಸುಮ್ಮನಾಗಿದೆ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಲಕ್ಷಾಂತರ ಜನ ಸಂಪರ್ಕ, ವಹಿವಾಟು ನಡೆಯೋ ಕೆ.ಆರ್ ಮಾರ್ಕೆಟ್ ಸ್ಥಿತಿ‌ ಅಧೋಗತಿಯಾಗಿದೆ‌. ಜನ ಜೀವ ಭಯದಲ್ಲಿರುವ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇತ್ತ ಕೆ.ಆರ್ ಮಾರ್ಕೆಟ್ ವ್ಯಾಪಾರಿಗಳ ಗೋಳಂತೂ ಕೇಳೋದೇ ಬೇಡ. ಅರ್ಧಂಬರ್ಧ ಕಾಮಗಾರಿಗೆ ಬಿದ್ದು ಗಾಯ ಮಾಡಿಕೊಳ್ಲೋರ ಸಂಖ್ಯೆ ಹೆಚ್ಚಾಗ್ತಿದ್ಯಂತೆ. ಪುಟ್ ಪಾತ್ ಕಾಮಗಾರಿ ಬೇಗ ಕಂಪ್ಲೀಟ್ ಮಾಡಲು ಸ್ಮಾರ್ಟ್ ಸಿಟಿ ನಿರ್ಲಕ್ಷ್ಯ ವಹಿಸುತ್ತೆ ಅಂತ ಜನ ದೂಡುತ್ತಿದ್ದಾರೆ. ಅತ್ತ 2 ವರ್ಷಗಳಿಂದ ಕಬ್ಬನ್ ಪಾರ್ಕ್ ನ ಸುತ್ತಲೂ ಫುಟ್ ಪಾತ್ ಕಾಮಗಾರಿ ನಡೆಯುತ್ತಿದೆ‌. ಆದ್ರೆ, ಇನ್ನೂ ಪೂರ್ಣಗೊಂಡಿಲ್ಲ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡೋ ಈ ಕಬ್ಬನ್ ಪಾರ್ಕ್ ಗೆ ಸ್ಮಾರ್ಟ್ ಸಿಟಿ ಕೆಲಸ ಅಂದವನ್ನ ಹಾಳು ಮಾಡತ್ತಿದೆ. ಇದಷ್ಟೇ ಅಲ್ಲದೆ, ಸರ್ಕಾರಕ್ಕೆ ಆದಾಯ ತಂದುಕೊಡುವ ಅವೆನ್ಯೂ ರಸ್ತೆಯಲ್ಲೂ 1 ವರ್ಷ, 8 ತಿಂಗಳಿಂದ ನಿಧಾನಗತಿಯಲ್ಲೇ ಸ್ಮಾರ್ಟ್ ಸಿಟಿಯ ಕೆಲಸ ನಡೆಯುತ್ತಿದೆ. ಇಲ್ಲಿನ ವ್ಯಾಪಾರಿಗಳು ಹಾಗೂ ಗ್ರಾಹಕರ ಕಷ್ಟ ಹೇಳ ತೀರದಾಗಿದೆ. ಯಾಕೆ ಸರ್ ಇಷ್ಟು ಡಿಲೇ ಆಗ್ತಿದೆ ಅಂತ ಸ್ಮಾರ್ಟ್ ಸಿಟಿಯ ಎಂಡಿ ರಾಜೇಂದ್ರ ಜೋಳನ್ ಅವ್ರನ್ನ ಕೇಳಿದ್ರೆ, ಸ್ಮಾರ್ಟ್ ಸಿಟಿಯ ಕೆಲಸ ನಡೆಯುವ ಭಾಗಗಳ ಜನರೇ ವಿರೋಧ ಮಾಡ್ಯಿದ್ರು. ಹೀಗಾಗಿ ಸ್ವಲ್ಪ ತಡವಾಗ್ತಿದೆ. ಜೂನ್ ಅಥವಾ ಜುಲೈ ತಿಂಗಳೊಳಗೆ ಕಬ್ಬನ್ ಪಾರ್ಕ್, ಅವೆನ್ಯೂ ರಸ್ತೆ ಹಾಗೂ ಕೆ.ಆರ್.ಮಾರ್ಕೆಟ್ ನ ಸ್ಮಾರ್ಟ್ ಸಿಟಿ ಕೆಲಸ ಮುಗಿಸ್ತೀವಿ ಅಂತ ಹೇಳ್ತಿದ್ದಾರೆ.ಸ್ಮಾರ್ಟ್ ಸಿಟಿ ಹೆಸರಲ್ಲಿ ಬೆಂಗಳೂರಿನ ಹಲವು ರಸ್ತೆಗಳು ಅದ್ವಾನ ಆಗೋಗಿದೆ. ಅಂದವನ್ನ ಹೆಚ್ಚಿಸುತ್ತೇವೆ ಅಂತೇಳಿ, ರಸ್ತೆಗಳೆಲ್ಲಾ ಗಬ್ಬೆದ್ದು ಹೋಗಿವೆ. ಇನ್ನಾದ್ರೂ ಡೆಡ್ ಲೈನ್ ಗಳನ್ನ ಕೊಡುವ ಬದಲು, ಆದಷ್ಟು ಬೇಗ ಕಾಮಗಾರಿ ಮುಗಿಸಲಿ ಅಂತ ಜನರ ಹಿಡಿಶಾಪ ಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಿಕಾ ಚೇತರಿಕಾ ಕಾರ್ಯಕ್ರಮ ವಿಫಲ