Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಾಡಹಬ್ಬ ಮೈಸೂರು ದಸರಾ ಹಬ್ಬ ಉದ್ಘಾಟಕರಾಗಿ ಮಾಜಿ ಸಿಎಂ ಸಿಎಂ ಎಸ್ ಎಂ ಕೃಷ್ಣಾ ರನ್ನ ಆಯ್ಕೆ ಮಾಡಲಾಗಿದೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ ಎಂ ಕೃಷ್ಣಾರ ಹೆಸರನ್ನು ಅಂತಿಮಗೊಳಿಸಿ, ಘೋಷಣೆ ಮಾಡಲಾಯ್ತು. ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಎಸ್.ಎಂ ಕೃಷ್ಣ ಕೇವಲ ಸಿಎಂ ಆಗಿದ್ದವರು ಮಾತ್ರ ಅಲ್ಲ, ಅವರ ಯೋಗದಾನ ಬಹಳ ಇದೆ. ಅವರು ಹಲವು ಉತ್ತಮ ಸೇವೆಗಳನ್ನು ಮಾಡಿದ್ದಾರೆ. ಎಸ್ ಎಂ ಕೃಷ್ಣ ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ಹಾಗಾಗಿ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ರು.