ಈ ಬಾರಿ ಗುಣಮಟ್ಟದ ನಿದ್ರೆ, ಸೌಂಡ್ ಮೈಂಡ್, ಹ್ಯಾಪಿ ವರ್ಲ್ಡ್ ಎನ್ನುವುದು ಥೀಮ್ ಆಗಿದೆ. ಇದರಡಿಯಲ್ಲಿ ನೋಡುವುದಾದರೆ ನಿದ್ದೆ (Sleep) ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಬೇಕಾದ ಅಗತ್ಯ ಕ್ರಮವಾಗಿದೆ. ಆರೋಗ್ಯದ ವಿಷಯಕ್ಕೆ ಬಂದರೆ, ದೇಹದಲ್ಲಿನ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ, ಇದು ನಮಗೆ ಸಮಗ್ರ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಸೌಂದರ್ಯ ಹೆಚ್ಚಲು ನಿದ್ದೆ ಉತ್ತಮ ಎನ್ನುವುದು ಪರಿಕಲ್ಪನೆಯಲ್ಲ. ಚರ್ಮದ ಆರೋಗ್ಯಕ್ಕೆ, ತ್ವಚೆ ಕಾಂತಿಯುತವಾಗಿ ಕಾಣಲು ನಿದ್ದೆ ಸಹಕಾರಿಯಾಗಿದೆ.
ನಿದ್ದೆ ಯಾವೆಲ್ಲಾ ರೀತಿಯಲ್ಲಿ ಸೌಂದರ್ಯ ವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುವುದನ್ನು ಟೈಮ್ಸ್ ನೌಗೆ ಡಾ. ರಿಂಕಿ ಕಪೂರ್ ವಿವರಿಸಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ.ನಳನಳಿಸುವ ಚರ್ಮ:
ನಿದ್ದೆಯಿಂದ ಚರ್ಮದ ಮೇಲಿನ ಸುಕ್ಕುಗಳು ಕಡಿಮೆ ಆಗುತ್ತದೆ. ಇದರಿಂದ ಚರ್ಮ ನಳನಳಿಸುತ್ತದೆ. ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಾಶಪಡಿಸಲು ನಿದ್ದೆ ಸಹಕಾರಿಯಾಗಿದೆ. ನಿದ್ರೆಯು ರಕ್ತದ ಹರಿವನ್ನು ಸುಧಾರಿಸುತ್ತದೆ, ಇದು ಹೆಚ್ಚು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಇದರಿಂದಾಗಿ ಚರ್ಮಕ್ಕೆ ವಿಶ್ರಾಂತಿ ಸಿಗುತ್ತದೆ. ಕಾಲಜನ್ ಚರ್ಮವನ್ನು ನಯವಾಗಿಡುತ್ತದೆ ಮತ್ತು ಕೂದಲು ಮತ್ತು ಉಗುರುಗಳನ್ನು ಸದೃಢಗೊಳಿಸುತ್ತದೆ.
ಮುಪ್ಪಿನ ಚಿಹ್ನೆಗಳನ್ನು ತೆಗೆದುಹಾಕುತ್ತದೆ:
ಚರ್ಮ ಹೆಚ್ವು ಸದೃಢವಾಗುವುದರಿಂದ ನಿಮ್ಮಲ್ಲಿ ಕಡಿಮೆ ಸುಕ್ಕುಗಳುಂಟಾಗುತ್ತವೆ.
ಪೂರ್ಣ ರಾತ್ರಿಯ ನಿದ್ರೆಯು ಹೆಚ್ಚು ನಾರನಂಶದ ಸತ್ವಗಳನ್ನು ಚರ್ಮಕ್ಕೆ ಒದಗಿಸುವುದರಿಂದ ಚರ್ಮದಲ್ಲಿ ಕಡಿಮೆ ಸುಕ್ಕುಗಳು ಉಂಟಾಗುತ್ತವೆ. ನಿದ್ದೆ ದೇಹದಿಂದ ವಿಷವನ್ನು ಹೊರಹಾಕುತ್ತದೆ. ನಿರ್ವಿಶೀಕರಣಗೊಂಡ ಚರ್ಮವನ್ನು ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಜತೆಗೆ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.
ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ:
ಪರಿಪೂರ್ಣ ನಿದ್ದೆಯಿಂದ ನೀವು ಸದೃಢವಾದ ಮತ್ತು ಆರೋಗ್ಯಕರ ಕೂದಲನ್ನು ಪಡೆಯುತ್ತೀರಿ. ಕೂದಲು ಉದ್ದವಾಗಿ ಬೆಳೆಯುವುದಕ್ಕೂ ಸಹಕಾರಿಯಾಗುತ್ತದೆ. ಪ್ರೊಟೀನ್ ಸಂಶ್ಲೇಷಣೆ ಮತ್ತು ಹಾರ್ಮೋನ್ ಕಾರ್ಯನಿರ್ವಹಣೆಗೆ ಉತ್ತಮ ನಿದ್ರೆ ಅತ್ಯಗತ್ಯ. ಇದು ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೆಚ್ಚಿದ ರಕ್ತದ ಹರಿವು ಕೂದಲಿಗೆ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ. ಇದು ಕೂದಲನ್ನು ಹೆಚ್ಚು ಬಲಪಡಿಸುತ್ತದೆ.
ಖುಷಿಯ ಮುಖ :
ನೀವು ಸಾಕಷ್ಟು ನಿದ್ರೆ ಮಾಡಿದಾಗ ಆರೋಗ್ಯಕರ ಮತ್ತು ಸಂತೋಷದ ಮುಖವನ್ನು ಹೊಂದಬಹುದು. ಕಡಿಮೆ ಅಥವಾ ನಿದ್ರೆಯಿಲ್ಲದೆ ನಿಮ್ಮ ಮುಖದ ಅಭಿವ್ಯಕ್ತಿಗಳು ಗಂಟಿಕ್ಕಿ ಮತ್ತು ಸುಸ್ತಾದಂತೆ ಕಾಣುತ್ತವೆ. ನಿದ್ರೆ ಸರಿಯಾಗಿಲ್ಲದಿದ್ದರೆ ಚರ್ಮವು ಮಂದ ಮತ್ತು ಶುಷ್ಕವಾಗುತ್ತದೆ. ಮಧ್ಯರಾತ್ರಿಯ ನಂತರ ಚರ್ಮದ ಕೋಶಗಳು ನವೀಕರಣ ಮೋಡ್‌ಗೆ ಹೋಗುತ್ತವೆ ಮತ್ತು ಚರ್ಮವನ್ನು ಸರಿಪಡಿಸುತ್ತವೆ. ಆದ್ದರಿಂದ, ನೀವು ನಿದ್ದೆ ಮಾಡದಿದ್ದರೆ ಚರ್ಮ ಕಾಂತಿಯನ್ನು ಕಳೆದುಕೊಳ್ಳುತ್ತದೆ.