Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಕೈವಾಕ್ ಗಳ ನಿರ್ಮಾಣ ಶೀಘ್ರದಲ್ಲೇ - ಆರ್. ಅಶೋಕ

ಸ್ಕೈವಾಕ್ ಗಳ ನಿರ್ಮಾಣ ಶೀಘ್ರದಲ್ಲೇ - ಆರ್. ಅಶೋಕ
ಬೆಂಗಳೂರು , ಬುಧವಾರ, 23 ಮಾರ್ಚ್ 2022 (16:58 IST)
ನಗರದಲ್ಲಿ ನಿರ್ಮಾಣ ಗೊಂಡಿರುವ ಸ್ಕೈವಾಕ್ ಗಳು ಸದುಪಯೋಗವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಪರಿಷತ್‍ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ವಿಷಯ ಪ್ರಸ್ತಾಪಿಸಿ, ಬೆಂಗಳೂರು ನಗರದಲ್ಲಿ ನಿರ್ಮಿಸಲಾದ ಸ್ಕೈವಾಕ್‍ಗಳು ಸದುಪಯೋಗವಾಗುತ್ತಿಲ್ಲ. ಜನರ ಸಂಚಾರದ ಬದಲು ಜಾಹಿರಾತುಗಳ ಪ್ರದರ್ಶನಕ್ಕೆ ಬಳಕೆಯಾಗುತ್ತವೆ. ಬಸವೇಶ್ವರ ವೃತ್ತ, ಮಹರಾಣಿ ಕಾಲೇಜು, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಸ್ಕೈವಾಕ್ ಗಳು ಸರಿಯಾಗಿ ಬಳಕೆಯಾಗಿಲ್ಲ ಎಂದು ವಿವರಿಸಿದರು.
 
2015ರಲ್ಲಿ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದು ಸ್ಕೈ ವಾಕ್ ಗಳ ನಿರ್ಮಾಣದ ವೇಳೆ ಪೊಲೀಸರ ಸಲಹೆ ಪಡೆಯುವಂತೆ ಸಲಹೆ ನೀಡಿದ್ದಾರೆ.
 
ಅನಗತ್ಯವಾಗಿ ಸ್ಕೈ ವಾಕ್ ಗಳ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ಖಾಸಗಿಯವರು ನಿರ್ವಹಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಸ್ಕೈವಾಕ್ ಗಳನ್ನು ನಿರ್ಮಿಸಲಾಗಿದೆ. ಇವು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಪರಿಗಣಿಸಬೇಕು