Publish Date: Sat, 22 Oct 2022 (20:21 IST)
Updated Date: Sat, 22 Oct 2022 (20:27 IST)
ದೀಪಾವಳಿ ಬೋನಸ್ ನೀಡಿಲ್ಲ ಎಂದು ಕಾರ್ಮಿಕ ಟವರ್ ಏರಿ ಕುಳಿತಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ನಗರದಲ್ಲಿರುವ J.P. ಸಿಮೆಂಟ್ ಕಾರ್ಖಾನೆಯಲ್ಲಿ ನಡೆದಿದೆ. ಮಹಮ್ಮದ್ ರಶೀದ್ J.P. ಸಿಮೆಂಟ್ ಕಾರ್ಖಾನೆಯ ಕಾರ್ಮಿಕನಾಗಿದ್ದು. ಬೋನಸ್ ನೀಡುವಂತೆ ಆಗ್ರಹಿಸಿ ಬೆಳಗ್ಗೆ 9 ಗಂಟೆ ಸುಮಾರಿಗೆ ಹೊಸದಾಗಿ ನಿರ್ಮಿಸಿರುವ ಸೆಲ್ಲೋ ಟವರ್ ಏರಿ ಕುಳಿತು ಆಗ್ರಹಿಸಿದ್ದಾನೆ. ಕಾರ್ಖಾನೆ ಆಡಳಿತ ಮಂಡಳಿ ನಿಯಮದ ಪ್ರಕಾರ ಬೋನಸ್ ನೀಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಸಹ ಕಾರ್ಮಿಕರು ಕೆಳಗಡೆ ಇಳಿಯುವಂತೆ ಹೇಳಿದ್ರು ಸಹ ಇಳಿಯದ ಕಾರ್ಮಿಕ, ಕಾರ್ಖಾನೆಯವರು ಬೋನಸ್ ನೀಡವವರೆಗೂ ಕೆಳಗಿಳಿಯುವದಿಲ್ಲ ಅಂದು ಹಠ ಹಿಡಿದಿದ್ದಾನೆ.
geetha
Publish Date: Sat, 22 Oct 2022 (20:21 IST)
Updated Date: Sat, 22 Oct 2022 (20:27 IST)