ಗೌರಿ ಲಂಕೇಶ್ ತನಿಖೆಯನ್ನ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇದೀಗ ಆಪರೇಶನ್ 150 ಡಿಟೆಸ್ ಐ ಆರಂಭಿಸಿದ್ದಾರೆ. ಹೌದು, ಗೌರಿ ಹಂತಕರು ಈ ಬ್ರ್ಯಾಂಡ್`ನ ಪಲ್ಸಾರ್ ಬೈಕಿನಲ್ಲಿ ಹೋಗಿರುವ ಮಾತಿ ಹಿಸಿಕ್ಕಿದ್ದು, ರಾಜ್ಯಾದ್ಯಂತ 150 ತಂಡಗಳು ಹುಡುಕಾಟದಲ್ಲಿ ತೊಡಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಾಕ್ ಟೈಲ್ ರೆಡ್ ವೈನ್ ಬಣ್ಣದ ಪಲ್ಸಾರ್ ಬಣ್ಣದ ಬೈಕಿನಲ್ಲಿ ಹಂತಕರು ಪರಾರಿಯಾಗಿದ್ದು, ಬೈಕ್ ಯಾರ ಹೆಸರಿನಲ್ಲಿದೆ. ಖರೀದಿಸಿದವರ್ಯಾರು..? ಖರೀದಿಸದವರ ಬಳಿಯೇ ಇದೆಯಾ..? ಮತ್ಯಾರಿಗಾದರೂ ಮಾರಿದ್ದಾರಾ..? ಅಥವಾ ಬೈಕ್ ಕಳ್ಳತನವಾದ ಬಗ್ಗೆ ದೂರು ನೀಡಲಾಗಿದೆಯಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದರ ಜೊತೆಗೆ ಸಿಟಿವಿ ದೃಶ್ಯಾವಳಿಯಲ್ಲಿ ಪಲ್ಸಾರ್ ಬೈಕಿನ 2 ನಂಬರ್ ಪೊಲೀಸರಿಗೆ ಗೊತ್ತಾಗಿದೆ. ಮತ್ತೆರಡು ನಂಬರ್ ಸ್ಪಷ್ಟವಾಗಿಲ್ಲದ ಕಾರಣ ಅಹಮದಾ ಬಾದ್`ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಉಳಿದೆರಡು ನಂಬರ್`ಗಳ ಮಾಹಿತಿ ಸಿಕ್ಕ ಬಳಿಕ ಕೊಲೆಗಾರರ ಪತ್ತೆಗೆ ಪ್ರಮುಖವಾಗಿ ನೆರವಾಗಲಿದೆ ಎಂದು ತಿಳಿದು ಬಂದಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್`ಐಟಿ ಅಧಿಕಾರಿಗಳು ಎಲ್ಲ ಆಂಗಲ್`ಗಳಲ್ಲೂ ತನಿಖೆ ಮುಂದುವರೆಸಿದ್ದಾರೆ. ಈ ಮಧ್ಯೆ, ಹಂತಕರ ಸುಳಿವು ನೀಡುವಂತೆ ಎಸ್`ಐಟಿ ನೀಡಿದ್ದ ಫೋನ್ ನಂಬರ್`ಗೆ ಕರೆ ಮಾಡಿದ ಶೇ.30ರಷ್ಟು ಜನರು ಸ್ವಾಮೀಜಿಯೊಬ್ಬರ ಹೆಸರು ಹೇಳಿದ್ದು, ಅವರನ್ನೂ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ