Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿ ಹೇಳಿಕೆ ದಾಖಲಿಸಿಕೊಂಡ ಎಸ್ ಐಟಿ

ರಮೇಶ್ ಜಾರಕಿಹೊಳಿ
ಬೆಂಗಳೂರು: ಸಿಡಿ ಪ್ರಕರಣ ಸಂಬಂಧಿಸಿದಂತೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಎಸ್ಐಟಿ ನಿನ್ನೆ ರಾತ್ರಿ ದಾಖಲಿಸಿಕೊಂಡಿದೆ.

 

ಸಿಡಿಯಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದುಕೊಂಡ ಎಸ್ಐಟಿ ಆಕೆಯ ಜೊತೆಗೆ ನಾಲ್ವರು ಯುವಕರನ್ನು ಬಂಧಿಸಿದೆ ಎನ್ನಲಾಗಿದೆ. ಇವರ ಪೈಕಿ ಯುವತಿಯ ಪ್ರಿಯಕರನ ಬಳಿ ಸಾಕಷ್ಟು ವಿಚಾರಗಳಿವೆ ಎಂಬುದು ಎಸ್ಐಟಿ ಗುಮಾನಿ.

ಇದೆಲ್ಲದರ ನಡುವೆ ನಿನ್ನೆ ರಾತ್ರಿ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಎಸ್ಐಟಿ ದಾಖಲಿಸಿಕೊಂಡಿದೆ. ತನಿಖಾಧಿಕಾರಿಗಳ ಬಳಿ ರಮೇಶ್ ಜಾರಕಿಹೊಳಿ ರಾಜಕೀಯವಾಗಿ ನನ್ನನ್ನು ಈ ವಿಚಾರದಲ್ಲಿ ಟಾರ್ಗೆಟ್ ಮಾಡಲಾಗಿದೆ. ಹಣಕಾಸಿನ ವಿಚಾರಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಿರಬಹುದು ಎಂದು ಹೇಳಿಕೆ ನೀಡಿದ್ದಾರೆನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಎದುರೇ ಮಹಿಳೆ ಮೇಲೆ ಮಾಜಿ ಪತಿಯ ಸಹೋದರನ ವಿಕೃತಿ