Publish Date: Sat, 03 Jul 2021 (14:33 IST)
Updated Date: Sat, 03 Jul 2021 (14:37 IST)
ಬೆಂಗಳೂರು : ಸಿದ್ದು ವಿರುದ್ಧ ನಿರ್ಮಲಾ ಸೀತಾರಾಮನ್ ಆರೋಪ ವಿಚಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.15 ಕಮೀಷನ್ ನಿಂದ 5495 ಕೋಟಿ ಬರಬೇಕು.ರಾಜ್ಯಕ್ಕೆ ಬರಬೇಕಾದ ಹಣ ಈ ಯಮ್ಮ ತಡೆದಿದ್ದಾರೆ.ನಾನೇನು ಬೇರೆ ಕಡೆಯಿಂದ ಮಾಹಿತಿ ಪಡೆದ್ನಾ? ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು.ಹಾಗಾದರೆ 15 ಪೇ ಕಮೀಷನ್ ಸುಳ್ಳು ಹೇಳುತ್ತಾ?ಇದರ ಬಗ್ಗೆ ಯಡಿಯೂರಪ್ಪ ಕೂಡ ಮಾತನಾಡಿಲ್ಲ.
ಒಂದು ಪತ್ರ ಬರೆದು ಸುಮ್ಮನಾದ್ರಾ?ಈ ಯಮ್ಮನನ್ನ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ?ಡಿಸೆಲ್ ಗೆ ಮನಮೋಹನ್ ಸಿಂಗ್ ಅವಧಿಯಲ್ಲಿ 3.45 ಪೈಸೆ ಸೆಸ್ ಇತ್ತು.ಆದರೆ ಈಗ 31.84 ಪೈಸೆಗೆ ಏರಿಸಿದ್ದು ಯಾಕೆ?ಆಗ ಪೆಟ್ರೋಲ್ ಮೇಲೆ 9.25ಪೈಸೆ ಇತ್ತು. ಇವತ್ತು 32.66 ಪೈಸೆ ಸೆಸ್ ಹಾಕಿದ್ದಾರೆ.ಇದು ನಿರ್ಮಲಾ ಸೀತಾರಾಮನ್ ಗೆ ಗೊತ್ತಿಲ್ವೇ.ಸೆಸ್ ತೆಗೆಯಿರಿ ಕಡಿಮೆ ಆಗುತ್ತೆ. ರಾಜ್ಯದವರು ಸೆಸ್ ಹಾಕಿದ್ದಾರೆ.
ಅವರಿಗೂ ಕಡಿಮೆ ಮಾಡಿ ಅಂತ ಹೇಳ್ತೇನೆ.ಕೇಂದ್ರ ಸೆಸ್ ಹಾಕಿದ್ದು ಯಾಕೆ ?ಎಂದು ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಸಿದ್ದು ತಿರುಗೇಟು ನೀಡದರು