Publish Date: Mon, 28 Jan 2019 (18:26 IST)
Updated Date: Mon, 28 Jan 2019 (18:28 IST)
ಸಿದ್ದರಾಮಯ್ಯ ಮಾಜಿ ಸಿಎಂ ಅಲ್ಲ, ಅವರು ಈಗಲೂ ಸಿಎಂ ಆಗಿದ್ದಾರೆ. ಹೀಗಂತ ಶಾಸಕರೊಬ್ಬರು ಸಿದ್ದು ಸಮ್ಮುಖದಲ್ಲೇ ಹೇಳಿಕೆ ನೀಡಿದ್ದಾರೆ.
ದೋಸ್ತಿ ಸರಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಯನ್ನು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕ ನೀಡಿದ್ದಾರೆ. ಕಾಂಗ್ರೆಸ್ ಶಾಸಕರಲ್ಲಿ ಅಸಮಧಾನದ ಹೊಗೆ ಇನ್ನೂ ಮುಗಿದಂತೆ ಕಾಣುತ್ತಿಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಕೇಳಿಬಂದಿದೆ.
ಕನಕದಾಸ ಜಯಂತಿ ಆಚರಣೆ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಎದುರಲ್ಲೇ ಶಾಸಕ ಸುಧಾಕರ್ ಹೇಳಿಕೆ ನೀಡಿದ್ದಾರೆ. ಸಿದ್ರಾಮಯ್ಯ ಈಗಲೂ ಹಾಲಿ ಸಿಎಂ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಕುರುಬ ಸಮುದಾಯದ ಹಲವು ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.