Publish Date: Wed, 31 Jul 2019 (10:06 IST)
Updated Date: Wed, 31 Jul 2019 (10:08 IST)
ಬೆಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ್ ಅವರರು ಮೃತಪಟ್ಟ ಹಿನ್ನಲೆ ಉದ್ಯಮಿ ಸಿದ್ದಾರ್ಥ್ ಅವರು ದುಡುಕಿನ ನಿರ್ಧಾರ ತೆಗೆದುಕೊಂಡು ಬಿಟ್ಟರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಕುಟುಂಬದವರಿಗೆ, ಸಿದ್ಧಾರ್ಥ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳೋಕೆ ಶಬ್ಧಗಳೇ ಸಿಗುತ್ತಿಲ್ಲ. ಮಂಗಳವಾರ ಎಸ್.ಎಂ ಕೃಷ್ಣ ಅವರ ಮನೆಗೆ ಹೋಗಿ ಅವರ ಶ್ರೀಮತಿಗೆ ಸಾಂತ್ವಾನ ಹೇಳಿ ಬಂದಿದ್ದೆ. ಅವರ ಅಂತ್ಯಕ್ರಿಯೆಗೆ ಹೋಗಿ ಭಾಗವಹಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಒಬ್ಬ ಆಗರ್ಭ ಶ್ರೀಮಂತ, ಕಾಫಿ ಡೇ ಇಡೀ ಪ್ರಪಂಚಕ್ಕೆ ಪರಿಚಯಿಸಿದವರು ದುಡುಕಿಬಿಟ್ಟರು. ಆ ಸಂದರ್ಭದಲ್ಲಿ ಅವರ ಜೊತೆ ಯಾರಾದರೂ ಒಬ್ಬರು ಇದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಮಳೆ ಬಂದರೂ ಅವರು ಅವರು ವಾಕಿಂಗ್ ಹೋಗಿ ತಮ್ಮ ಡ್ರೈವರ್ ಗೆ ಇಲ್ಲಿಯೇ ಇರು ಎಂದು ಹೇಳಿ ನದಿಗೆ ಹಾರಿದ್ದಾರೆ. ಇಂತಹ ದಾರುಣ ಘಟನೆ ನಡೆದಿದೆ. ರಾಜ್ಯ ಮುಖ್ಯಮಂತ್ರಿಯಾಗಿ ಆ ಕುಟುಂಬದವರಿಗೆ ಈ ಧೈರ್ಯವನ್ನು ಸಹಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.