Publish Date: Mon, 18 Jun 2018 (11:28 IST)
Updated Date: Mon, 18 Jun 2018 (11:30 IST)
ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿ ಕ್ಷೇತ್ರದಲ್ಲಿ ಗೆದ್ದು ಬಂದಿದ್ದರು.
ಆದರೆ ಬಾದಾಮಿ ಸಿದ್ದರಾಮಯ್ಯಗೆ ಉಳಿದುಕೊಳ್ಳಲು ಸ್ವಂತ ಮನೆ, ಕಚೇರಿ ಇರಲಿಲ್ಲ. ಆದರೆ ಇಲ್ಲಿನ ಜನರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಹೊಸ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು. ಅದಕ್ಕೀಗ ಸ್ಥಳೀಯರೊಬ್ಬರು ಉಚಿತ ಮನೆ ಆಫರ್ ನೀಡಿದ್ದಾರೆ.
ಶಂಕರ್ ಕೆಳಗಿನಮನಿ ಎಂಬವರು ತಮ್ಮ ಬಾಡಿಗೆಗೆ ನೀಡುವ ಮನೆಯನ್ನು ಸಿದ್ದರಾಮಯ್ಯಗಾಗಿ ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಸಿದ್ದರಾಮಯ್ಯರ ಆಪ್ತರು ಈ ಮನೆ ನೋಡಿಕೊಂಡು ಹೋಗಿದ್ದು, ಅವರಿಗೆ ಇಷ್ಟವಾಗಿದೆಯಂತೆ. ಆದರೆ ಸ್ವತಃ ಸಿದ್ದರಾಮಯ್ಯ ಮನೆ ನೋಡಿಲ್ಲ. ಬಹುಶಃ ಆ ಬಳಿಕವೇ ಮನೆ ಫೈನಲ್ ಆಗಬಹುದು ಎಂದು ಶಂಕರ್ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.