ಬೆಂಗಳೂರು : ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ಕಲಿಕೆಯ ಸಮಸ್ಯೆಯನ್ನು ರಾಜಕೀಯ ವಿಚಾರಕ್ಕೆ ಬಳಸಿ ರಾಹುಲ್ ಗಾಂಧಿಯ ಕಾಲೆಳೆದಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.
ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್‍ನಲ್ಲಿ ಪ್ರಧಾನಿ ಜೊತೆಗಿನ ಸಂವಾದದ ವೇಳೆ ಡೆಹ್ರಾಡೂನ್‍ನ ವಿದ್ಯಾರ್ಥಿನಿಯೊಬ್ಬಳು ಡೈಲೆಕ್ಸಿಕ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡುವ ಬಗ್ಗೆ ಹೇಳುತ್ತಿರುವಾಗ ಪ್ರಧಾನಿ ಮೋದಿ ಅವರು 40-50 ವರ್ಷದ ಮಕ್ಕಳಿಗೂ ಈ ಕಾರ್ಯಕ್ರಮ ಉಪಯೋಗ ಆಗುತ್ತಾ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ.
ಈ ವಿಚಾರಕ್ಕೆ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರು,’ ಈಗ ತಾನೇ ಪ್ರಧಾನಿ ಮೋದಿ ಅವರು ಡೈಲೆಕ್ಸಿಕ್ ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜಕೀಯ ಬಳಕೆ ಮಾಡಿರುವುದು ಗಮನಿಸಿದೆ. ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆ ಆಗಬೇಕು. ಇದಕ್ಕಿಂತ ಕೆಳಮಟ್ಟಕ್ಕೆ ನೀವು ಇಳಿಯಲು ಸಾಧ್ಯನೇ ಇಲ್ಲ. ಯಾವ ನದಿಯಲ್ಲಿ ಮುಳುಗೆದ್ರೂ ನಿಮ್ಮ ಮನಸ್ಥಿತಿ ಬದಲಾಗಲ್ಲ. ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿಧಾನ ಇರಬಹುದು. ಆದರೆ ನಿಮ್ಮಂತೆ ಹೃದಯ ಹೀನರಲ್ಲ. ವಿದ್ಯಾರ್ಥಿಗಳ ಕಲಿಕೆಯ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿದ ನಿಮಗೆ ನಾಚಿಕೆ ಆಗಬೇಕು” ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.