Publish Date: Thu, 28 Nov 2019 (11:21 IST)
Updated Date: Thu, 28 Nov 2019 (11:22 IST)
ದಾವಣಗೆರೆ : ಬಿ.ಸಿ.ಪಾಟೀಲ್ ಹತಾಶರಾಗಿ ಮಾತಾಡ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಟೀಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಹುಂಡಿ ಕೆ.ಜೆ.ಜಾರ್ಜ್, ಮಹದೇವಪ್ಪ ಮತ್ತು ಕೆಂಪಯ್ಯ ಅವರ ಬಳಿ ಇದೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಎಲ್ಲವೂ ತಿಳಿಯುತ್ತದೆ ಎಂದು ಬಿ.ಸಿ.ಪಾಟೀಲ್, ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕೆಂಪಯ್ಯ ಐಜಿ ಆಗಿದ್ದವ್ರು, ಬಿ.ಸಿ.ಪಾಟೀಲ್ ಇನ್ಸ್ ಪೆಕ್ಟರ್ ಆಗಿದ್ದರು. ಬಿ.ಸಿ.ಪಾಟೀಲ್ ಪ್ರಕಾರ ಪೊಲೀಸ್ ಇಲಾಖೆ ಲಂಚ ತೆಗೆದುಕೊಳ್ಳುತ್ತಾ..? ಬಿ.ಸಿ.ಪಾಟೀಲ್ ಯಾಕೆ ಪೊಲೀಸ್ ಇಲಾಖೆ ಬಿಟ್ಟು ಬಂದ್ರು? ಅವ್ರು ಹತಾಶರಾಗಿ ಮಾತಾಡ್ತಿದ್ದಾರೆ. ಅವ್ರ ಹೇಳಿಕೆಗೆ ಬೆಲೆ ಕೊಡಬೇಕಾಗಿಲ್ಲ. ಜನ ಬಿ.ಸಿ.ಪಾಟೀಲ್ ರನ್ನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.