ಬಿಜೆಪಿಯವರು ಹರ್ ಘರ್ ತಿರಂಗ ನಾಟಕ ಆಡುತ್ತಿದ್ದಾರೆ. ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಬಿಜೆಪಿ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದಾರಾ? ಸತ್ತಿದ್ದಾರಾ?, ಈ ನರೇಂದ್ರ ಮೋದಿ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು. ಇವರ ದೇಶಪ್ರೇಮ ತೋಳ ಕುರಿಮರಿ ಕತೆಯಾಗಿದೆ. ನರೇಂದ್ರ ಮೋದಿ ದೊಡ್ಡ ನಾಟಕಕಾರ. ಈ ನಕಲಿ ದೇಶಪ್ರೇಮಿಗಳ ಬಾಯಿಮುಚ್ಚಿಸುವ ಕಾರ್ಯ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು . ಇನ್ನೂ ಈ ವೇಳೆ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಹಿನ್ನೆಲೆಯಲ್ಲಿ ಟೋಪಿ ಮತ್ತು ಟೀ ಶರ್ಟ್ ಹಾಗೂ ಕರ ಪತ್ರವನ್ನು ಕೈ ನಾಯಕರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕೈಯಿಂದ ಕೆ.ಜೆ.ಜಾರ್ಜ್ಗೆ ಟೋಪಿ ಹಾಕಿಸಿದ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಕೈಲಿ ಉಗ್ರಪ್ಪಗೆ ಟೋಪಿ ಹಾಕಿಸಿದರು. ಬಳಿಕ ತಾವೇ ಸ್ವತಃ ಸಿದ್ದರಾಮಯ್ಯಗೆ ಟೋಪಿ ಹಾಕಿದರು. ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಸಿದ್ದರಾಮಯ್ಯ ತಲೆಗೆ ಟೋಪಿ ತೊಡಿಸಿದರು. ಡಿಕೆಶಿಗೆ ಸಿದ್ದರಾಮಯ್ಯ ಟೋಪಿ ಹಾಕಿದರು.