Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾಕ್ಷ್ಯ ಇಲ್ಲ ಅಂದ್ರೆ ಆರೋಪವೇ ಮಾಡಿಲ್ಲ ಅಂತಲ್ಲ ಎಂದ ಸಿದ್ದರಾಮಯ್ಯ: ಮುಡಾ ಕೇಸ್ ಕೂಡಾ ಹೀಗೇನಾ

Siddaramaiah

Krishnaveni K

ಬೆಂಗಳೂರು , ಸೋಮವಾರ, 18 ನವೆಂಬರ್ 2024 (08:50 IST)
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸುವಾಗ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರಿಗೇ ಮುಳುವಾಗಿದೆ. ಇದರ ಬಗ್ಗೆ ನೆಟ್ಟಿಗರು ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಗುತ್ತಿಗೆದಾರರಿಂದ ಕಮಿಷನ್ ಪಡೆಯಲಾಗುತ್ತಿತ್ತು ಎಂದು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿತ್ತು. ಆ ವಿಚಾರ ಈಗ ಸದ್ದು ಮಾಡುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಆದರೆ ಆರೋಪ ಸಾಬೀತಾಗಲಿಲ್ಲ. ಕೆಲವೊಮ್ಮೆ ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳ ಖುಲಾಸೆ ಆಗುತ್ತದೆ. ಹಾಗಂತ ಕೊಲೆಯೇ ಆಗಿಲ್ಲ ಎಂದು ಅರ್ಥ ಅಲ್ಲ. ಕೊಲೆ ನಡೆದಿರುತ್ತದೆ. ಆದರೆ ಸಾಕ್ಷ್ಯಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೇ. ಇದೂ ಹಾಗೆಯೇ ಎಂದು ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಆದರೆ ಅವರ ಈ ಹೇಳಿಕೆಗೆ ಈಗ ಸಾರ್ವಜನಿಕರು ಟೀಕೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಈ ಕಾಮೆಂಟ್ ಗೆ ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು ಹಾಗಿದ್ದರೆ ಮುಡಾ ಕೇಸ್ ಕೂಡಾ ಹೀಗೇ ಆಗಿರಬಹುದಲ್ವೇ ಎಂದು ಪ್ರಶ್ನೆ ಮಾಡಿ ತಿರುಗೇಟು ಕೊಟ್ಟಿದ್ದಾರೆ.

ಮುಡಾ ಕೇಸ್ ನಲ್ಲೂ ಸಿದ್ದರಾಮಯ್ಯ ನನ್ನ ಪಾತ್ರವಿಲ್ಲ, ನಾನು ಅಕ್ರಮ ಮಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಸಾಮಾಜಿಕ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಸಿಎಂ ಪತ್ನಿಗೆ ಅಕ್ರಮವಾಗಿ 14 ಸೈಟು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ತನಿಖಾ ಹಂತದಲ್ಲಿ ಈ ಕೇಸ್ ಕೂಡಾ ಹಾಗೆಯೇ ಸಾಕ್ಷ್ಯವಿಲ್ಲ ಎಂದ ಮಾತ್ರಕ್ಕೆ ಅಪರಾಧವೇ ಆಗಿಲ್ಲ ಎಂದು ಅರ್ಥ ಅಲ್ಲವಲ್ಲ ಎಂದು ನೆಟ್ಟಿಗರು ಸಿದ್ದರಾಮಯ್ಯ ಮಾತನ್ನು ಅವರಿಗೇ ತಿರುಗಿಸಿಕೊಟ್ಟಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಹಕಾರಿ ಚಳವಳಿಯ ಮೂಲ ಮಂತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದು ಹೀಗೇ