Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಬಂಡಾಯವೆದ್ದಿದ್ದಾರೆ. ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಇಂದು ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ?
ರಾಜ್ಯ ಸರ್ಕಾದ ವಿರುದ್ಧವೇ ಹಿರಿಯ ಶಾಸಕ ಬಿಆರ್ ಪಾಟೀಲ್ ಸಿಡಿದೆದ್ದ ಬೆನ್ನಲ್ಲೇ ರಾಜು ಕಾಗೆ ಕೂಡಾ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಮಂತ್ರಿಗಳ ಅನುದಾನದ ಅಡಿಯಲ್ಲಿ 25 ಕೋಟಿ ಅನುಮೋದನೆಯಾದರೂ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಹೀಗೇ ಆದರೆ ಎರಡು ದಿನದಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದಿದ್ದರು.
ಅವರ ಹೇಳಿಕೆ ಈಗ ರಾಜ್ಯ ಸರ್ಕಾರದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯನವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಅವರು ಇರಪ್ಪಾ ನಾನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ.
ಏನು ಅನುದಾದ ಕೊಟ್ಟಿಲ್ವಂತೆ ಎಂದು ಮಾಧ್ಯಮಗಳಿಗೇ ಸಿಎಂ ಪ್ರಶ್ನೆ ಮಾಡುತ್ತಾರೆ. ಆಗ ಮುಖ್ಯಮಂತ್ರಿಗಳ ಅನುದಾನ ಎಂದಾಗ ಮುಖ್ಯಮಂತ್ರಿಗಳ ಅನುದಾನ ಎಂದು ಎಲ್ಲಾದ್ರೂ ಇದ್ಯಾ? ವಿಶೇಷ ಅನುದಾನ ಅಂತ ಇದೆ. ಅದು ನಾನೀಗ ಕರೆದು ಮಾತನಾಡುತ್ತೇನೆ ಬಿಡಪ್ಪಾ ಎಂದಿದ್ದಾರೆ.