Publish Date: Tue, 02 Apr 2019 (06:33 IST)
Updated Date: Tue, 02 Apr 2019 (14:36 IST)
ಹಾಸನ : ಸಿದ್ದರಾಮಯ್ಯ ಅವರೇ ನನ್ನ ನಾಯಕ ಎಂದು ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಹಾಸನ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ ಮಂಜು ಹೇಳಿದ್ದಾರೆ.
ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಇವತ್ತು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ ನನ್ನ ನಾಯಕ ಎಂದು ಹೇಳಿದ್ದಾರೆ.
ನಾನು ಬಿಜೆಪಿ ಸೇರುವ ಮುಂಚೆ ಕಾರ್ಯಕರ್ತರ ಸಭೆ ಮಾಡಿದ್ದೆ. ಅವರೆಲ್ಲರ ಸಲಹೆ ಪಡೆದ ಬಳಿಕವೇ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಈ ದೇಶಕ್ಕೆ ಸಮರ್ಥವಾದ ನಾಯಕ ಬೇಕು. ಅದು ನರೇಂದ್ರ ಮೋದಿ ಮಾತ್ರ. ಅದಕ್ಕಾಗಿ ನಾನು ಈ ಪಕ್ಷಕ್ಕೆ ಬಂದಿದ್ದೇನೆ, ನಾನು ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯ ವೇಳೆ ಮೋದಿ ಹವಾ ಇರಲಿಲ್ಲ. ಈಗ ಇಡೀ ದೇಶದಲ್ಲಿ ಮೋದಿ ಹವಾ ಇದೆ. ಮೋದಿ ಮತ್ತೊಮ್ಮೆ ಮೋದಿ ಎಂಬ ಮಾತು ಇಡೀ ದೇಶ ಹೇಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.