ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಟಾಮ್ ಉಝುನ್ನಾಲಿಯನ್ನ ರಕ್ಷಿಸಲಾಗಿದೆ. 2016ರಿಂದ ಯೆಮೆನ್`ನಿಂದ ಅಪಹರಣಕ್ಕೀಡಾಗಿದ್ದ ಪಾದ್ರಿಯನ್ನ ಓಮನ್ ವಿದೇಶಾಂಗ ಇಲಾಖೆ ಮತ್ತು ಯೆಮೆನ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ಸದ್ಯ, ಮಸ್ಕತ್`ನಲ್ಲಿರುವ ಪಾದ್ರಿ ಟಾಮ್ ಉಝುನ್ನಾಲಿಯನ್ನ ಇಂದು ರಾತ್ರಿ ಕೇರಳಕ್ಕೆ ಕರೆತರಲಾಗುತ್ತಿದೆ. ಈ ಸಂದರ್ಭ ಯೆಮೆನ್ ಸರ್ಕಾರಕ್ಕೆ ಪಾದ್ರಿ ಕೃತಜ್ಞತೆ ಅರ್ಪಿಸಿದ್ದು, ತನ್ನ ರಕ್ಷಣೆಗೆ ಶ್ರಮಿಸಿದ ಗೆಳೆಯರು, ಸಂಬಂಧಿಕರಿಗೆ ಧನ್ಯವಾದ ಹೇಳಿದ್ದಾರೆ. ನಾನು ಯೂರೋಪಿಯನ್ ಪಾದ್ರಿಯಾಗಿದ್ದರೆ ಐಸಿಸ್ ಉಗ್ರರು ಮತ್ತಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದರು. ಭಾರತ ಮೂಲದ ಪಾದ್ರಿಯಾದ್ದರಿಂದ ಬಚಾವ್ ಆದೆ ಎಂದಿದ್ದಾರೆ. ಟ್ವಿಟ್ಟರ್`ನಲ್ಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಟಾಮ್ ಬಿಡುಗಡೆಯಾಗಿರುವುದನ್ನ ತಿಳಿಸಲು ಸಂತಸವಾಗುತ್ತಿದೆ ಎಂದಿದ್ದಾರೆ.
ಒಮನ್ನಿನ ಸುಲ್ತಾನ್ ಅವರ ಮನವಿ ಮೇರೆಗೆ ಟಾಮ್ ಅವರನ್ನ ರಕ್ಷಿಸುವ ಕಾರ್ಯಾಚರಣೆಯಲ್ಲಿ ಒಮನ್ ಮತ್ತು ಯೆಮನ್ನಿನ ಎರಡೂ ದೇಶಗಳ ಅಧಿಕಾರಿಗಳು ತೊಡಗಿದ್ದರು. ಮಾರ್ಚ್ 2016ರಂದು ಯೆಮನ್ನಿನ ಅದೇನ್ ನಗರದಲ್ಲಿ ಮದರ್ ತೆರೆಸಾ ವೃದ್ಧಾಶ್ರಮದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದ ವೇಳೆ ಪಾದ್ರಿ ಟಾಮ್ ಅವರನ್ನ ಅಪಹರಿಸಲಾಗಿತ್ತು. ಈ ಸಂದರ್ಭ ವೃದ್ಧಾಶ್ರಮದ 15 ಮಂದಿಯನ್ನ ಉಗ್ರರು ಕೊಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ