ಪತ್ನಿಯ ಜೊತೆಗೆ ಕಳೆದ ರೋಮ್ಯಾನ್ಸ್ ವಿಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಪತಿಯೊಬ್ಬ ತನ್ನ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಘಟನೆ ನಡೆದಿದೆ.
ನೊಂದ ಪತ್ನಿ ತನ್ನ ವಿರುದ್ಧ ಬೆಂಗಳೂರಿನ ಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದು, ಫೋಟೊ ಇಟ್ಟುಕೊಂಡು 20 ಲಕ್ಷ ರೂಪಾಯಿಗಳನ್ನು ಕೊಡುವಂತೆ ಗಂಡ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಂತೆ.
ಗಂಡನಿಗೆ ಡಿವೋರ್ಸ್ ನೀಡಿದ್ದ 36 ವರ್ಷದ ಮಹಿಳೆ ತನ್ನ ಮಗಳೊಂದಿಗೆ ವಾಸವಾಗಿದ್ದಳು. ಆಗ ತನ್ನ ಜೊತೆ ಕೆಲಸ ಮಾಡುತ್ತಿದ್ದ ಮದನ್ ನನ್ನು ಎರಡನೇ ಗಂಡನಾಗಿ ಮದುವೆಯಾಗಿದ್ದಾಳೆ.
ಮದನ್ ಜೊತೆ ಮದುವೆಗೂ ಮೊದಲೇ ಲವ್ ಮಾಡಿ ನಂತರ ಮದುವೆಯಾಗಿದ್ದಾಳೆ. ಮದನ್ ಮನೆಯವರಿಗೆ ಮದುವೆ ವಿಷಯ ಗೊತ್ತಾಗಿ ಗಲಾಟೆ ಶುರುವಾಗಿದೆ. ಹೀಗಾಗಿ ಮದನ್ ಬೇರೆ ಹುಡುಗಿಯನ್ನು ಮದುವೆಯಾಗೋಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲ, ಮೊದಲ ಪತ್ನಿ ಹತ್ತಿರವಿದ್ದ ಹಣ, ಆಭರಣ ದೋಚಿದ್ದಾನೆ. ಖಾಸಗಿ ಫೋಟೊಗಳನ್ನು ಇಟ್ಟುಕೊಂಡು 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ ಅಂತ ಪತ್ನಿ ಕೇಸ್ ಹಾಕಿದ್ದಾಳೆ.