Publish Date: Sat, 10 Aug 2019 (18:44 IST)
Updated Date: Sat, 10 Aug 2019 (18:46 IST)
ಅನರ್ಹಗೊಂಡಿರೋ ಶಾಸಕ ಬಿ.ಸಿ.ಪಾಟೀಲ್ ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಸಾಗುತ್ತಿದೆ.
ಮತಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡುತ್ತಿರುವೆ. ಈ ಕುರಿತು ಮತಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮತದಾರರೊಂದಿಗೆ ಮಾತನಾಡಿದ ಬಳಿಕ ರಾಜಕೀಯ ನಡೆ ಪ್ರಕಟ ಮಾಡೋದಾಗಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಸಧ್ಯ ನಾನಿಲ್ಲ. ಆ ಪಾರ್ಟಿಯಿಂದ ಉಚ್ಛಾಟನೆಗೊಳಿಸಿದ್ದಾರೆ.
ಸುಪ್ರೀಂ ಕೋರ್ಟನಲ್ಲಿ ನಾವು ಸಲ್ಲಿಸಿರೋ ಅರ್ಜಿ ವಿಚಾರಣೆ ಮುಂದಿನ ವಾರ ನಡೆಯಬಹುದು ಅಂತ ಹೇಳಿದ್ರು. ಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡಿದ ಬಳಿಕವೇ ಬಿಜೆಪಿ ಸೇರ್ಪಡೆ ಬಗ್ಗೆ ಅಥವಾ ಮುಂದಿನ ನಡೆ ಬಗ್ಗೆ ಸ್ಪಷ್ಟಪಡಿಸೋದಾಗಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.
Jagadeesh
Publish Date: Sat, 10 Aug 2019 (18:44 IST)
Updated Date: Sat, 10 Aug 2019 (18:46 IST)