Publish Date: Thu, 02 Jul 2020 (16:35 IST)
Updated Date: Thu, 02 Jul 2020 (16:37 IST)
ಮಧ್ಯಾಹ್ನ 3 ರಿಂದ ಅಂಗಡಿಗಳು, ಮಾರುಕಟ್ಟೆ ವ್ಯಾಪಾರ ಬಂದ್ ಆಗಲಿದೆ.
ಕೋವಿಡ್-19 ವೈರಾಣು ಬಳ್ಳಾರಿ ನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 11 ವರೆಗೆ ಮಧ್ಯಾಹ್ನ 3 ಗಂಟೆಯಿಂದ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಗರದ ವ್ಯಾಪಾರಸ್ಥರು ಮತ್ತು ವರ್ತಕರು ನಿರ್ಧರಿಸಿದ್ದಾರೆ.
ಇಲ್ಲಿನ ವ್ಯಾಪಾರಸ್ಥರು ಮತ್ತು ವರ್ತಕರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆ ಸೇರಿ ಕೋವಿಡ್ ವೈರಾಣು ಹರಡುವಿಕೆಯನ್ನು ತಡೆಗಟಗಟ್ಟುವುದರ ಕುರಿತಾಗಿ ಚರ್ಚೆ ನಡೆಸಿದರು.
ನಿತ್ಯ ವ್ಯವಹಾರದೊಂದಿಗೆ ಜನತೆಯ ಆರೋಗ್ಯವೂ ಮುಖ್ಯವಾಗಿದೆ. ಆರ್ಥಿಕ ಬೆಳವಣಿಗೆ ಎಂದಾದರೂ ಸಾಧಿಸಬಹುದು ಎಂದು ಜುಲೈ 3 ರಿಂದ 11 ರವರೆಗೆ ಪ್ರತಿನಿತ್ಯ ಅವರವರ ವ್ಯಾಪಾರಕ್ಕೆ ಅನುಗುಣವಾಗಿ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಬೆಳಿಗ್ಗೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ಮಧ್ಯಾಹ್ನ 3 ಗಂಟೆಗೆ ಎಲ್ಲಾ ಬಂದ್ ಮಾಡಲು ನಿರ್ಧರಿಸಿದ್ದಾರೆ.